ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ನಿಮ್ಮ ಸಹಕಾರವನ್ನ ನಾವು ಎಂದು ಮರೆಯಲು ಸಾಧ್ಯವಿಲ್ಲ. ಕಾರವಾರ-ಅಂಕೋಲಾ ಕ್ಷೇತ್ರಕ್ಕೆ ಸದಾ ನೀವೆ ಶಾಸಕರಾಗಿರಬೇಕು..ನಿಮ್ಮಿಂದ ಮಾತ್ರ ಈ ಕ್ಷೇತ್ರ ಹಾಗೂ ನಮ್ಮಂತಹ ಮಹಿಳಾ ಸಂಘಟನೆಗಳು ಗಟ್ಟಿಯಾಗಿ ಬೆಳೆಯಲು ಸಾಧ್ಯ ಎಂದು ಶಿರವಾಡದ ಮಹಿಳಾಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕದ ಮಹಿಳೆಯರು ಶಾಸಕ ಸತೀಶ್ ಸೈಲ್ ಅವರನ್ನ ಸನ್ಮಾನಿಸಿ ಅಭಿನಂದಿಸಿದರು..
ಕಾರವಾರದ ಸದಾಶಿವಗಡದಲ್ಲಿರುವ ಶಾಸಕ ಸತೀಶ ಸೈಲ್ ಅವರ ಮನೆಗೆ ಭೇಟಿ ನೀಡಿ ಶಾಸಕರನ್ನ ಸನ್ಮಾನಿಸಿ ಮಾತನಾಡಿದರು. ನಿಮ್ಮ ಸಹಕಾರದಿಂದಲ್ಲೆ ನಮ್ಮ ಆಹಾರ ತಯಾರಿಕಾ ಘಟಕ ಉತ್ತಮವಾಗಿ ಬೆಳೆಯಲು ಸಾಧ್ಯವಾಗಿದೆ.ಬಡವರ ಹಾಗೂ ಕಷ್ಟದಲ್ಲಿ ಇದ್ದವರಿಗೆ ನಿಮ್ಮ ಹಾಗೆ ಸಹಾಯ ಮಾಡುವ ಶಾಸಕರನ್ನ ನಾವು ಎಂದು ಕಂಡಿಲ್ಲ.ಜನಪರ ಕಾಳಜಿ ಉಳ್ಳನೀವೆ ಸದಾ ಈ ಕ್ಷೇತ್ರದ ಶಾಸಕರಾಗಿ ಇರಬೇಕು ಎನ್ನುವುದು ನಮ್ಮೇಲ್ಲರ ಆಸೆ. ಭಗವಂತ ಸದಾ ನಿಮ್ಮಗೆ ಒಳ್ಳೆಯದನ್ನ ಮಾಡಲಿ ಎಂದು ಹಾರೈಸಿದರು.
ಈ ವೇಳೆ ಸಂಘದ ಅಧ್ಯಕ್ಷೆ ಪ್ರೇಮಕಲಾ ತಾಂಡೇಲ್, ಸದಸ್ಯರಾದ ಪೂರ್ವಿ, ದೀಪ್ತಿ, ವರ್ಷಾ,ಸುನಿತಾ, ಮಾಲಾ, ಸುರೇಖಾ,ನಂದಿನಿ,ಗೀತಾ,ಜ್ಯೋತಿ, ಶಂಕುತಲಾ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು..
ಗಮನಿಸಿ
- Fengal Cyclone:ಫೆಂಗಲ್ ಚಂಡಮಾರುತ ಹಿನ್ನಲೆ : ನಾಳೆ ಶಾಲಾ-ಕಾಲೇಜಿಗೆ ರಜೆ ಘೋಷಿಸಿದ ಡಿಸಿ
- Earthquake Clarification/ಭೂ ಕಂಪನದ ಬಗ್ಗೆ ರಿಕ್ಟರ್ ಮಾಪಕದಲ್ಲಿ ಯಾವುದೇ ದಾಖಲೆ ಇಲ್ಲ
- ಉತ್ತರಕನ್ನಡದಲ್ಲಿ ಕಂಪಿಸಿದ ಭೂಮಿ : ಮನೆ ಬಿಟ್ಟು ಓಡಿದ ಜನ