ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ಉತ್ತರಕನ್ನಡ ಜಿಲ್ಲೆಯಲ್ಲಿ ಕೆಂಪು ಚಿರೆಕಲ್ಲು ಗಣಿಗಾರಿಕೆ ನಿಷೇಧದ ನಡುವೆ ಮಿರ್ಜಾನ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ಕೊಟ್ಟವರು ಯಾರು? ಎನ್ನುವ ಕುರಿತು ಸುದ್ದಿಬಿಂದು ಸುದ್ದಿ ಪ್ರಕಟಿಸಿದ ಬೆನ್ನಲ್ಲೆ ಇದೀಗ ಅನೇಕ ಭಾಗದಿಂದ ಸಾರ್ವಜನಿಕರು ತಮ್ಮ ಭಾಗದಲ್ಲಿಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಹೇಳಿಕೊಳ್ಳಲಾರಂಭಿಸಿದ್ದಾರೆ…
ಕುಮಟಾ ತಾಲೂಕಿನ ಮಿರ್ಜಾನ ಭಾಗದಲ್ಲಿ ಐದಾರು ಮಂದಿ ಉದ್ಯಮಿಗಳು ಗಣಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ತಮ್ಮ ಪ್ರಭಾವ ಬಳಸಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಕ್ರಮ ದಂಧೆ ನಡೆಸುತ್ತಿದ್ದಾರೆ ಎನ್ನುವುದು ಬಹಿರಂಗವಾಗಿಯೇ ಎಲ್ಲರಿಗೂ ಗೊತ್ತಿರೋ ವಿಚಾರ.ಇನ್ನೂ ಕುಮಟಾ ತಾಲೂಕಿನ ಮೂರೂರು,ಕಲ್ಲಬ್ಬೆ ಹಾಗೂ ಹೊನ್ನಾವರ ತಾಲೂಕಿನ ಅನೇಕ ಕಡೆಯಲ್ಲಿ ಮಿರ್ಜಾನದಲ್ಲಿ ಅಕ್ರಮ ಕಲ್ಲು ದಂಧೆ ನಡೆಸುತ್ತಿರುವಂತೆ ಆ ಭಾಗದಲ್ಲಿಯೂ ಸಹ ಹಗಲು ರಾತ್ರಿ ಎನ್ನದೆ ರಾಜಾರೋಷವಾಗಿ ಯಾರ ಭಯವಿಲ್ಲದೆ, ಸರಕಾರಕ್ಕೆ ರಾಜಧನ ಸಹ ಸಲ್ಲಿಸದೆ ಅನುಮತಿ ಪಡೆದವರಿಗಿಂತ ಹೆಚ್ಚಾಗಿ ಕೆಂಪು ಚಿರೆಕಲ್ಲು ದಂಧೆ ಸರಾಗವಾಗಿ ನಡೆಸಲಾಗುತ್ತಿದೆ….
“ಧ್ವನಿ ಎತ್ತದಂತೆ ತೋಟದ ಮನೆಯಲ್ಲಿ ಬಾಡೂಟ”
ಈ ಅಕ್ರಮ ದಂಧೆ ವಿರುಧ್ದವಾಗಿ ಯಾರೇಲ್ಲಾ ಧ್ವನಿ ಎತ್ತುತ್ತಾರೋ ಸ್ಥಳೀಯ ಒಂದಿಷ್ಟು ಹೋರಾಟಗಾರರು ಹಾಗೂ ಸ್ಥಳೀಯವಾಗಿರುವ ಜನಪ್ರತಿನಿಧಿಗಳಿಗೆ ಈ ಗಣಿ ಮಾಲೀಕರಾದವರು ಆಗಾಗ ಗೋವಾ ತೀರ್ಥ ಪ್ರಸಾದ ಜೊತೆಗೆ ಭರ್ಜರಿ ಬಾಡೂಟ ಏರ್ಪಡಿಸುವ ಮೂಲಕ ಅಕ್ರಮ ದಂಧೆ ವಿರುದ್ದ ಧ್ವನಿ ಎತ್ತದಂತೆ ನೋಡಿಕೊಳ್ಳುತ್ತಾರೆ ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.ಬಾಡೂಟ ಸವಿಸವಿದ ಒಂದಿಷ್ಟು ಮಂದಿ ಈ ವಿಚಾರವನ್ನ ಅನೇಕ ಕಡೆಯಲ್ಲಿ ಹಂಚಿಕೊಂಡಿದ್ದಾರೆ..
ವನ್ಯ ಜೀವಿಗಳಿಗೂ ಆಪತ್ತು ಸಾಧ್ಯತೆ
ಜಿಲ್ಲೆಯಲ್ಲಿ ನಡೆಯುತ್ತಿರುವ ಬಹುತೇಕ ಕೆಂಪು ಚಿರೆಕಲ್ಲು ಗಣಿಗಾರಿಕೆಗಳು ಅರಣ್ಯ ಪ್ರದೇಶದ ಸುತ್ತಮುತ್ತ ಇದೆ.ಇದರಿಂದಾಗಿ ರಾತ್ರಿವೇಳೆಯಲ್ಲಿ ಓಡಾಡುವ ವನ್ಯಜೀವಿಗಳಿಗೂ ಸಂಕಷ್ಟ ಉಂಟಾಗುತ್ತಿದೆ ಎನ್ನಲಾಗುತ್ತಿದೆ. ಕಲ್ಲುಕೊರೆದ ಬಳಿಕ ಹೊಂಡಗಳನ್ನ ಮುಚ್ಚದೆ ಹಾಗೆ ಬಿಡುವ ಕಾರಣ ಆ ಭಾಗದಲ್ಲಿ ಓಡಾಡುವ ವನ್ಯಜೀವಿಗಳು ಕಲ್ಲು ಗಣಿ ಹೊಂಡದಲ್ಲಿ ಏನಾದರೂ ಬಿದ್ದು ಪ್ರಾಣಕಳೆದುಕೊಂಡರೆ ಅದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.ಅದೇ ಇದ್ದರೂ ಸಹ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇವೆಲ್ಲದರ ಬಗ್ಗೆ ಸಮಗ್ರ ತನಿಖೆ ಮಾಡಬೇಕಿದೆ..
ಸುದ್ದಿ ಮುಂದುವರೆಯಲಿದೆ..
ಈಕೆಳಗಿನ ಸುದ್ದಿಯನ್ನು ಓದಿ