ಕಾರವಾರ – ಪರಿಸರ ಪ್ರವಾಸೋದ್ಯಮದಲ್ಲಿ ಉತ್ತರಕನ್ನಡ ಜಿಲ್ಲೆ ದೇಶದಲೇ ಪ್ರಖ್ಯಾತಿ ಪಡೆದಿದೆ. ಇಲ್ಲಿನ ನೈಸರ್ಗಿಕ ಪರಿಕಲ್ಪನೆ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಕಡಲತೀರ ಬಯಸಿ ಬರುವ ಪ್ರವಾಸಿಗರಿಗೆ ಗೋಕರ್ಣ, ಕುಮಟಾ, ಹೊನ್ನಾವರ ದಂತ ಪ್ರದೇಶಗಳು, ಅರಣ್ಯ ಇಚ್ಚಿಸಿ ಬರುವ ಪ್ರವಾಸಿಗರು ದಾಂಡೇಲಿ, ಜೊಯಡಾ, ರಾಮನಗರದಂತಹ ಪ್ರದೇಶಗಳಿಗೆ ಆಗಮಿಸುತ್ತಾರೆ.

ಆದರೆ ಜಿಲ್ಲೆಯಲ್ಲಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹೋಮ್‌ ಸ್ಟೇಗಳು ಅಕ್ರಮವಾಗಿ ನಿರ್ಮಾಣವಾಗಿರುವುದು ಜಿಲ್ಲೆಯ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಈ ಮೊದಲು ಸುದ್ದಿಬಿಂದು ವರದಿ ಮಾಡಿತ್ತು. ಆದರೆ ಈ ಅಕ್ರಮ ಹೋಮ್ ಸ್ಟೇ ಗಳನ್ನು ಮಟ್ಟ ಹಾಕಬೇಕಾದ ಅಧಿಕಾರಿಗಳೇ.. ಅಕ್ರಮ ಹೋಮ್‌ ಸ್ಟೇ ಗಳಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಬೇಲಿಯೇ ಎದ್ದು ಹೊಲ ಮೈದಂತಿದೆ.

ಇದನ್ನೂ ಓದಿ

ಪ್ರವಾಸೋದ್ಯಮ ಇಲಾಖೆಯ ನಿಯಮದ ಪ್ರಕಾರ ಹೋಮ್‌ಸ್ಟೇ ಗಳು ನಾಲ್ಕು ಕೊಠಡಿ ಸೇರಿದಂತೆ ಒಂದು ಅಡುಗೆ ಮನೆ ಹೊಂದಿರಬೇಕು ಎಂದಿದೆ. ಆದರೆ ನಾಲ್ಕು ಕೊಠಡಿಯ ಕಟ್ಟದ ಫೋಟೊ ತೋರಿಸಿ ಪರವಾನಿಗೆ ಪಡೆದು ನಲವತ್ತು ಕೊಠಡಿ ಕಟ್ಟಿದ ಸಾಕಷ್ಟು ನಿದರ್ಶನಗಳು ಜಿಲ್ಲೆಯಲ್ಲಿವೆ. ಇನ್ನೂ ಈ ಹೋಮ್‌ ಸ್ಟೇ ಪರವಾನಿಗೆ ಕೇವಲ ಐದು ವರ್ಷಕ್ಕೆ ಮಾತ್ರ ನೀಡಲಾಗುತ್ತದೆ. ಐದು ವರ್ಷದ ಬಳಿಗ ಪರವಾನಿಗೆ ನವೀಕರಿಸು ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೋಮ್ ಸ್ಟೇ ಇರುವ ಸ್ಥಳಕ್ಕೆ ಆಗಮಿಸಿ ಕಟ್ಟಡಗಳ ಸಂಖ್ಯೆ ಪರಿಶೀಲನೆ ಮಾಡಿ ಪರವಾನಿಗೆ ನವೀಕರಸಬೇಕು ಎಂಬ ನಿಯಮವಿದೆ. ಆದರೆ ಅಧಿಕಾರಿಗಳು ಮಾತ್ರ ತಮ್ಮ ಕಚೇರಿಯಿಂದಲೇ ಸ್ಥಳ ಪರಿಶೀಲನೆ ನಡೆಸಿ ಪರವಾನಿಗೆ ನವೀಕರಣ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

suddibindu.in

ಈ ಎಲ್ಲಾ ಅಕ್ರಮಕ್ಕೆ ಪ್ರಮುಖ ಕಾರಣ ಅಧಿಕಾರಿಗಳು ಮತ್ತು ಅಕ್ರಮ ರೆಸಾರ್ಟ್ ಮಾಲೀಕರ ನಡುವಿನ ಅಪವಿತ್ರ ಮೈತ್ರಿ ಎಂಬ ಆರೋಪ ಕೇಳಿ ಬಂದಿದೆ. ಕಚೇರಿಗೆ ರಜೆ ಇದ್ದ ಸಂದರ್ಭದಲ್ಲಿ ತಮ್ಮ ಕುಟುಂಬದ ಸಮೇತ ಅಕ್ರಮ ರೆಸಾರ್ಟ್ ಗಳಲ್ಲಿ ಪ್ರತ್ಯಕ್ಷವಾಗುವ ಅಧಿಕಾರಿಗಳು ಮೋಜು ಮಸ್ತಿಯಲ್ಲಿ ತೊಡುತ್ತಾರೆ. ಇನ್ನು ರೆಸಾರ್ಟ್ ಮಾಲೀಕರು ಅಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಬೇಕಾಗುವ ಸಕಲ ವ್ಯವಸ್ಥೆಯನ್ನು ಮಾಡುತ್ತಾರೆ ಎಂಬ ಆರೋಪವು ಇದೆ. ಈ ಎಲ್ಲಾ ವ್ಯವಸ್ಥೆಯನ್ನು ಅನುಭವಿಸುವ ಅಧಿಕಾರಿಗಳ ಬಳಿಗೆ ಅಕ್ರಮ ಹೋಮ್‌ ಸ್ಟೇಗಳ ವಿಚಾರವಾಗಿ ದೂರು ನೀಡಿದರೂ ಹೇಗೆ ನ್ಯಾಯ ಸಿಗಲು ಸಾದ್ಯ ಎಂಬುದು ಅನೇಕ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಆದ್ದರಿಂದ ಸಂಬಂಧಿಸಿದ ಮೇಲಿನ ಅಧಿಕಾರಿಗಳು ಈ ಅಕ್ರಮ ಚಟುವಟಿಗಳಿಗೆ ಕಡಿಮಾಣ ಹಾಕಲು ಜಿಲ್ಲೆಯ ಎಲ್ಲಾ ಹೋಮ್ ಸ್ಟೇ ಗಳ ಸಿ.ಸಿ ಕ್ಯಾಮರಾ ಸೀಝ್ ಮಾಡಿ ಈ ಹೋಮ್ ಸ್ಟೇಗೆ ಆಗಮಿಸಿ ಮೋಜು ಮಸ್ತಿ ಮಾಡುವ ಅಧಿಕಾರಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಾಗ ಮಾತ್ರ ಮತ್ತೆ ನಾಯಿ ಕೊಡೆಯಂತೆ ತಲೆ ಎತ್ತುವ ಅಕ್ರಮ ಹೋಮ್ ಸ್ಟೇ ಗಳ ಸಂಖ್ಯೆ ಕಡಿಮೆ ಆಗಬಹುದು ಎಂಬ ಆಗ್ರಹ ಕೇಳಿ ಬಂದಿದೆ.

!