suddibindu.in
Kumta:ಕುಮಟಾ:ಕಮಲ ಪಕ್ಷದ ಕಾರ್ಯಕರ್ತರೇ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಇಂದು ನಡೆದಿದೆ.
ಮೊನ್ನೆ ರಾಜ್ಯ ಸರ್ಕಾರ ಇಂಧನ ಬೆಲೆ ಏರಿಸಿದ್ದನ್ನು ವಿರೋಧಿಸಿ ಇಂದು ಬಿಜೆಪಿಗರು ಪ್ರತಿಭಟಿಸಲು ಸಜ್ಜಾಗಿದ್ದರು. ಆದರೆ ಪ್ರತಿಭಟನೆ ವೇಳೆ ಕಮಲ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷದ ವಿರುದ್ಧವೇ ಧಿಕ್ಕಾರ ಕೂಗಿ ನಗೆಪಾಟಲಿಗೀಡಾಗಿದ್ದಾರೆ.
ಇದನ್ನೂ ಓದಿ
- ರೇಬೀಸ್ ಹೋರಿಯಿಂದ ರಂಪಾಟ: ವ್ಯಕ್ತಿಗೆ ತಿವಿತ
- 85 ಸಾವಿರ ನಗದು, ಚಿನ್ನ ಕದ್ದ ಆರೋಪಿ ಬಂಧನ
- ಅರ್ಪಿತಾಗೆ ವಿಟಿಯುನಿಂದ ಡಾಕ್ಟರೇಟ್
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, “ಕಾರ್ಯಕರ್ತರು ಧಿಕ್ಕಾರ ಕೂಗಿದ್ದು ಸರಿಯಾಗಿದೆ. ಯಾಕೆಂದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ನಂತರವೇ 68 ರೂಪಾಯಿಯಷ್ಟು ಇದ್ದ ಇಂಧನ ಬೆಲೆ 100ರ ಗಡಿ ದಾಟಿದ್ದು” ಎಂದು ಜನ ಕೂಡ ಹೇಳಲಾರಂಭಿಸಿದ್ದಾರೆ.
ಒಟ್ಟಾರೆ ಇದೀಗ ಬಿಜೆಪಿಗರ ಸ್ಥಿತಿ ಊದೋದು ಕೊಟ್ಟು ಬಾರಿಸುವುದನ್ಮು ಕೊಂಡಂತಾಗಿದೆ ಎಂದು ಜನ ಲೇವಡಿ ಮಾಡಲಾರಂಭಿಸಿದ್ದಾರೆ.ಕಾರ್ಯಕರ್ತರು ಮಾಡಿದ ತಪ್ಪಿನಿಂದಾಗಿ ಇದೀಗ ಬಿಜೆಪಿ ಮುಖಂಡರು ತಲೆ ಚಚ್ಚಿಕೊಳ್ಳುವಂತಾಗಿದೆ.