suddibindu.in
ದಾಂಡೇಲಿ : ನಗರದ ನಿರ್ಮಲ ನಗರದ ಮನೆವೊಂದರಲ್ಲಿ ಅಡುಗೆ ಸಿಲಿಂಡರ್ ಬ್ಲಾಸ್ಟ್ ಆಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ನಿರ್ಮಲನಗರದಲ್ಲಿರುವ ಪ್ಯಾಟ್ರಿಶಾ ಡೊಮನಿಕ್ ವಾಜ್ ಮಾಲಕತ್ವದ ಮನೆಯಲ್ಲಿ ಮಹಮ್ಮದ್ ಶಾಹುಬುದ್ದೀನ್ ರಾಝ್ವಿ ಅವರ ಕುಟುಂಬ ಬಾಡಿಗೆಗಿದ್ದು, ಮನೆಯಲ್ಲಿ ಹಚ್ಚಿಟ್ಟಿದ್ದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಈ ಸಂದರ್ಭದಲ್ಲಿ ಮನೆಯ ಗೋಡೆ ಮತ್ತು ಮೇಲ್ಚಾವಣಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇನ್ನು ಈ ದುರ್ಘಟನೆಯಿಂದ ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ಇದನ್ನೂ ಓದಿ
- ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿ ಮಂಗಳೂರಿಗೆ ಸ್ಥಳಾಂತರಿಸುವ ಕ್ರಮ ಸರಿಯಲ್ಲ
- ಅನಂತಮೂರ್ತಿ ಹೆಗಡೆ ಪ್ರತಿಭಟನೆಗೆ ಸ್ಥಳದಲ್ಲೆ ಆದೇಶಿಸಿದ ಡಿಸಿ
- ಭಾರತ್ ಸೈನ್ಯಕ್ಕೆ ಬೆಚ್ಚಿಬಿದ್ದ ಪಾಕ್ : 5 ಸಾವಿರ ಸೈನಿಕರ ರಾಜೀನಾಮೆ
ವಿಷಯ ತಿಳಿದು ಘಟನಾ ಸ್ಥಳಕ್ಕೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯವನ್ನು ಮಾಡಿದ್ದಾರೆ. ಮನೆಯೊಳಗಡೆ ಇದ್ದ ಎರಡು ಸಿಲಿಂಡರ್ ಸೇರಿದಂತೆ ಬ್ಲಾಸ್ಟ್ ಆಗಿರುವ ಸಿಲಿಂಡರನ್ನು ಹೊರ ತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಭೀಮಣ್ಣ.ಎಂ.ಸೂರಿ, ಪಿಎಸ್ಐ ಐ.ಆರ್.ಗಡ್ಡೇಕರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಲು ಸಹಕರಿಸುವುದರ ಜೊತೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಬೆಂಕಿ ನಂದಿಸಲು ಸ್ಥಳೀಯರು ಸಹಕರಿಸಿದ್ದಾರೆ. ಈ ದುರ್ಘಟನೆಯಿಂದ ಮಹಮ್ಮದ್ ಶಾಹುಬುದ್ದೀನ್ ಕುಟುಂಬ ಮತ್ತು ಮನೆಯ ಮಾಲಕರಾದ ಪ್ಯಾಟ್ರಿಶಾ ಡೊಮನಿಕ್ ವಾಜ್ ಅವರು ತೀವ್ರ ನೊಂದಿದ್ದಾರೆ.