suddibindu.in
ಶಿರಸಿ: ಹಿರಿಯ ಸಹಕಾರಿ ಧುರೀಣ ದಿ.ಶ್ರೀಪಾದ್ ಹೆಗಡೆ ಕಡವೆ ಅವರ ಮನೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಭೇಟಿ ನೀಡಿ, ಕುಟುಂಬಸ್ಥರೊಂದಿಗೆ ಚಹಾಕೂಟದಲ್ಲಿ ಭಾಗಿಯಾದರು.

ದಿ.ಕಡವೆ ಅವರ ಸೊಸೆ ಪ್ರಮೋದಾ ಹೆಗಡೆ ಅವರು ಈ ವೇಳೆ ಉಡಿತುಂಬಿ ಗೌರವಿಸಿದರು. ‘ಮಾರ್ಗರೇಟ್ ಆಳ್ವಾರವರು ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಅವರಿಗೆ ಉಡಿತುಂಬಿದ್ದೆ; ಅವರು ಅಂದು ಜಯಶಾಲಿಯಾಗಿದ್ದರು. ನಿಮಗೂ ಕೂಡ ಆಶೀರ್ವದಿಸಿದ್ದೇನೆ, ನೀವೂ ಜಯಶಾಲಿಯಾಗಲಿದ್ದೀರಿ’ ಎಂದು ಪ್ರಮೋದಾ ಹೆಗಡೆ ಹಾರೈಸಿದರು. ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪಾದ ಹೆಗಡೆ ಹಾಗೂ ಅವರ ಕುಟುಂಬಸ್ಥರು ಇದ್ದರು.

ಇದನ್ನೂ ಓದಿ

ಹಿರಿಯ ಕಾಂಗ್ರೆಸ್ಸಿಗನ ಮನೆಗೆ ಭೇಟಿ: ಕಾಂಗ್ರೆಸ್ ಪಕ್ಷದ ಹಿರಿಯರಾದ ಶಿರಸಿಯ ರಾಚಪ್ಪ ಜೊಗಳೇಕರ್ ಅವರ ಮನೆಗೂ ಡಾ.ಅಂಜಲಿ ನಿಂಬಾಳ್ಕರ್ ಅವರು ಭೇಟಿ ನೀಡಿ ಅವರ ಆಶೀರ್ವಾದ ಪಡೆದು, ಚುನಾವಣೆಯ ಕುರಿತು ಚರ್ಚೆ ನಡೆಸಿದರು. ಈ ವೇಳೆ ಮನೆಯ ಮಹಿಳಾ ಸದಸ್ಯರು ಡಾ.ಅಂಜಲಿ ಅವರಿಗೆ ಉಡಿ ತುಂಬಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ್ರು, ಕೆಪಿಸಿಸಿ ಮಾಧ್ಯಮ ವಕ್ತಾರ ದೀಪಕ ದೊಡ್ಡೂರ್, ಮಹಿಳಾ ಕಾಂಗ್ರೆಸ್ ನ ಜ್ಯೋತಿ ಪಾಟೀಲ್, ರಾಚಪ್ಪ ಅವರ ಕುಟುಂಬಸ್ಥರು ಇದ್ದರು.

ಸ್ವರ್ಣವಲ್ಲಿ ಮಠದ ಅಧ್ಯಕ್ಷರ ಭೇಟಿ: ಡಾ.ಅಂಜಲಿ ಅವರು ಖಾನಾಪುರಕ್ಕೆ ತೆರಳುವ ಮಾರ್ಗಮಧ್ಯೆ ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಅಧ್ಯಕ್ಷರಾದ ವಿ.ಎನ್.ಹೆಗಡೆ ಬೊಮ್ಮನಳ್ಳಿ ಅವರನ್ನ ಭೇಟಿಯಾದರು. ಸ್ವರ್ಣವಲ್ಲಿ ಮಠಾಧೀಶರ ಭೇಟಿಯ ಕುರಿತು ಇದೇವೇಳೆ ಚರ್ಚೆ ನಡೆಸಿದರು.

ಪ್ರದೀಪ್ ಶೆಟ್ಟಿ ಮನೆಯಲ್ಲಿ ಭೋಜನ: ಇಲ್ಲಿನ ನಗರಸಭೆಯ ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅವರ ಮನೆಗೆ ಮಧ್ಯಾಹ್ನ ಭೇಟಿ ನೀಡಿದ ಡಾ.ಅಂಜಲಿ, ಕುಟುಂಬದ ಸದಸ್ಯರ ಯೋಗಕ್ಷೇಮ ವಿಚಾರಿಸಿದರು. ಕುಟುಂಬಸ್ಥರೊಂದಿಗೆ ಭೋಜನ ಸವಿದರು.