ಸುದ್ದಿಬಿಂದು ಬ್ಯೂರೋ
ಭಟ್ಕಳ‌: ಭಟ್ಕಳ ಪುರಸಭೆಯನ್ನ ಮೇಲ್ದರ್ಜೆಗೆ ಏರಿಸಿ ನಗರಸಭೆಯನ್ನಾಗಿ ಮಾಡಿ ಅದಕ್ಕೆ ಜಾಲಿ ಪಟ್ಟಣ ಪಂಚಾಯತನ್ನು ಸೇರಿಯುವ ಪ್ರಯತ್ನ ನಡೆಸಲಾಗುತ್ತಿದೆ. ಇದನ್ನ ವಿರೋಧಿಸಿ ಜಾಲಿ ಪಟ್ಟಣ ಪಂಚಾಯದ ಸಾರ್ವಜನಿರು ಪಟ್ಟಣ ಪಂಚಾಯತ ಎದುರು ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮ ಪಂಚಾಯತ ಆಗಿರು ಜಾಲಿ ಪಂಚಾಯತನ್ನ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಿದ್ದರೂ ಸಹ ಪಂಚಾಯತಕ್ಕೆ ಸಿಗುವಷ್ಟು ಅನುದಾನ ಸಿಗುತ್ತಿಲ್ಲ. ಇನ್ನೂ ಮೂಲಭೂಯ ಸೌಕರ್ಯ ಒದಗಿಸಲು ಆಗುತ್ತಿಲ್ಲ.ಪಟ್ಟಣ ಪಂಚಾಯತನ್ನಾಗಿ ಮಾಡಿದ ನಂತರ ಮನೆ ಟ್ಯಾಕ್ಸ್ ಏರಿಕೆ ಮಾಡಲಾಗಿದೆ. ಇದು ಬಡವರಿಗೆ ಹೊರೆಯಾಗಿದೆ‌. ಟ್ಯಾಕ್ಸ್ ಏರಿಕೆ ಮಾಡಿದರೂ ಕುಡಿಯುವ ನೀರು ಸೇರಿದಂತೆ ಯಾವ ಸೌಲಭ್ಯಗಳು ಸರಿಯಾಗಿ ನೀಡಲಾಗುತ್ತಿಲ್ಲ. ಇನ್ನೂ ಜಾಲಿ ಪಟ್ಟಣ ಪಂಚಾಯತನ್ನ ಭಟ್ಕಳ ನಗಸಭೆಯನ್ನಾಗಿ ಮಾಡಿ ಅದಕ್ಕೆ ಜಾಲಿ ಪಟ್ಟಣ ಪಂಚಾಯತ ಸೇರಿಸಲು ಬೀಡುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ನಗರಸಭೆ ಆದ ಬಳಿಕ ಮನೆ ಟ್ಯಾಕ್ಸ್ ಸೇರಿದಂತೆ ಎಲ್ಲವು ಸಹ ದುಬಾರಿ ಆಗಲಿದೆ. ಹೀಗಾಗಿ ಈಗ ಇರುವ ಪಟ್ಟಣ ಪಂಚಾಯತಕ್ಕೆ ಸಿಗಬೇಕಾದ ಸೌಲಭ್ಯವನ್ನ ಕಲ್ಪಿಸಬೇಕು. ನಗರಸಭೆಗೆ ಸೇರಿಸುವ ಪ್ರಯತ್ನವನ್ನ ಕೈ ಬಿಡಬೇಕು ಇದು ಮುಂದುವರೆದರೆ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ‌.