ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ-ಉತ್ತರಾಯಣ-ಶಿಶಿರ-ಮಾಘ ಮಾಸ-ಶುಕ್ಲಪಕ್ಷ-ಬುಧವಾರ
ತಿಥಿ: ಪಂಚಮಿ ತಿಥಿಯು ಸಂಜೆ 06.03 ರವರೆಗೂ ಇದ್ದು ನಂತರ ಷಷ್ಠಿ ಆರಂಭವಾಗುತ್ತದೆ
ನಕ್ಷತ್ರ : ರೇವತಿ ನಕ್ಷತ್ರವು 04.25 ವರೆಗೂ ಇದ್ದು ನಂತರ ಅಶ್ವಿನಿ ನಕ್ಷತ್ರ ಆರಂಭವಾಗುತ್ತದೆ
ಸೂರ್ಯೋದಯ: ಬೆಳಗ್ಗೆ 06.43
ಸೂರ್ಯಾಸ್ತ: ಸಂಜೆ 06.23
ರಾಹುಕಾಲ: ಮಧ್ಯಾಹ್ನ12.00 ರಿಂದ 01.30

ಈ ದಿನದ ಅದೃಷ್ಟದ ಸಂಖ್ಯೆ :0-1-6-5

ಮೇಷ ರಾಶಿ : ಉದ್ಯೋಗಾಕಾಂಕ್ಷಿಗಳು ಅವರು ಇಷ್ಟಪಡುವ ಸ್ಥಳದಲ್ಲಿ ಉದ್ಯೋಗವನ್ನು ಕಂಡುಕೊಳ್ಳುತ್ತಾರೆ.ಅತಿಯಾದ ಕೆಲಸವು ತಲೆನೋವು ಮತ್ತು ಆಯಾಸವನ್ನು ಉಂಟುಮಾಡುತ್ತದೆ. ಮನೆಕೆಲಸಗಳ ಜೊತೆಗೆ ವೈಯಕ್ತಿಕ ಕೆಲಸಗಳಿಗೂ ಗಮನ ಕೊಡಿ. ನಿಮ್ಮ ನಿರ್ಲಕ್ಷ್ಯವು ಇತರರನ್ನು ನೋಯಿಸುತ್ತದೆ. ವಿದ್ಯಾರ್ಥಿಗಳು ಅಧ್ಯಯನ ಮತ್ತು ವೃತ್ತಿಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
ಅದೃಷ್ಟ ಸಂಖ್ಯೆ :, 1 ಅದೃಷ್ಟ ಬಣ್ಣ : ನೀಲಿ

ವೃಷಭ ರಾಶಿ : ನಿಮ್ಮ ನಿರ್ಲಕ್ಷ್ಯವು ಇತರರನ್ನು ನೋಯಿಸುತ್ತದೆ.ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ . ಉದ್ಯೋಗಾಕಾಂಕ್ಷಿಗಳು ಅವರು ಇಷ್ಟಪಡುವ ಸ್ಥಳದಲ್ಲಿ ಉದ್ಯೋಗವನ್ನು ಕಂಡುಕೊಳ್ಳುತ್ತಾರೆ. . ಅತಿಯಾದ ಕೆಲಸವು ತಲೆನೋವು ಮತ್ತು ಆಯಾಸವನ್ನು ಉಂಟುಮಾಡುತ್ತದೆ.ಮನೆಕೆಲಸಗಳ ಜೊತೆಗೆ ವೈಯಕ್ತಿಕ ಕೆಲಸಗಳಿಗೂ ಗಮನ ಕೊಡಿ. ವಿದ್ಯಾರ್ಥಿಗಳು ಅಧ್ಯಯನ ಮತ್ತು ವೃತ್ತಿಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
ಅದೃಷ್ಟ ಸಂಖ್ಯೆ : 9 ಅದೃಷ್ಟ ಬಣ್ಞ : ಬಿಳಿ

ಮಿಥುನ ರಾಶಿ : ಯಂತ್ರೋಪಕರಣಗಳು ಮತ್ತು ಕಾರ್ಖಾನೆ ಸಂಬಂಧಿತ ಕೆಲಸಗಳಲ್ಲಿ ಪ್ರಗತಿ ಇರುತ್ತದೆ. ಗ್ರಹದ ಸ್ಥಿತಿ ಉತ್ತಮವಾಗಿದೆ. ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಜೊತೆ ಟೆನ್ಷನ್ ಇರುತ್ತದೆ. ಯುವಕರು ಗೊಂದಲದ ಬದಲು ವೃತ್ತಿಯತ್ತ ಗಮನ ಹರಿಸುತ್ತಾರೆ.
ಅದೃಷ್ಟ ಸಂಖ್ಯೆ :4, ಅದೃಷ್ಟ ಬಣ್ಣ : ಕಪ್ಪು

ಕರ್ಕ ರಾಶಿ :ವಿವಾಹಿತರ ಜೀವನ ಸುಖಮಯವಾಗಿರುತ್ತದೆ. ಅವಿವಾಹಿತರಿಗೆ ಅಂದುಕೊಂಡ ಬಾಳ ಸಂಗಾತಿ ಸಿಗಲಿದ್ದು ಕಂಕಣ ಭಾಗ್ಯ ಕೂಡಿ ಬರಲಿದೆ. ಪಂಚ ದಿವ್ಯ ರಾಜಯೋಗವು ಕರ್ಕಾಟಕ ರಾಶಿಯವರಿಗೆ ಶುಭ ತರಲಿದೆ. ಇದು ಕರ್ಕಾಟಕ ರಾಶಿಯವರ 7ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದರಿಂದ ಈ ರಾಶಿಗೆ ಸೇರಿದ ವ್ಯಾಪಾರಿಗಳಿಗೆ ಅಧಿಕ ಲಾಭ ದೊರೆಯಲಿದೆ. ವ್ಯಾಪಾರವನ್ನು ವಿಸ್ತರಿಸಲು ಅನೇಕ ಅವಕಾಶಗಳು ಸಿಗಲಿವೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಿದರೆ ಯಶಸ್ಸು,ಪ್ರಗತಿಯನ್ನು ಕಾಣುತ್ತೀರಿ.
ಅದೃಷ್ಟ ಸಂಖ್ಯೆ : 5 ಅದೃಷ್ಟ ಬಣ್ಣ : ಕೆಂಪು

ಸಿಂಹ ರಾಶಿ : ನಿಮ್ಮ ಪ್ರಿಯತಮೆ ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿದುಕೊಳ್ಳುತ್ತೀರಿ. ಇದುವರೆಗೂ ನಿರುದ್ಯೋಗಿಗಳಾಗಿ ಇರುವ ಜನರು, ಒಳ್ಳೆಯ ಉದ್ಯೋಗವನ್ನು ಪಡೆಯಲು ಒಳ್ಳೆಯ ದಿನ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಪ್ರಭಾವ ಬೀರುತ್ತವೆ ಮತ್ತು ನೀವು ನಿಮ್ಮ ಸಂಗಾತಿಯ ಜೊತೆ ರಾಜಿ ಮಾಡಿ
ಅದೃಷ್ಟ ಸಂಖ್ಯೆ :6, ಅದೃಷ್ಟ ಬಣ್ಣ: ಗುಲಾಬಿ

ಕನ್ಯಾ ರಾಶಿ: ದುಡುಕಿ ಮಾತನಾಡಿದಲ್ಲಿ ಉದ್ಯೋಗದಲ್ಲಿ ಹಿನ್ನಡೆ ಎದುರಿಸಬೇಕು. ಸಹೋದ್ಯೋಗಿಗಳ ಜೊತೆ ಚರ್ಚಿಸಿದರೆ ಪ್ರತಿ ಸಮಸ್ಯೆಗೂ ಪರಿಹಾರವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ದೊರೆವ ಲಾಭಕ್ಕೆ ತೃಪ್ತಿ ಪಡಬೇಕಾಗುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಮನದಲ್ಲಿನ ಬೇಸರದಿಂದ ದೂರವಾಗಲು ಸಂಗಾತಿಯೊಂದಿಗೆ ದೂರದ ಪ್ರದೇಶಕ್ಕೆ ತೆರಳುವಿರಿ. ಸೋದರ ನಡುವೆ ಅನಾವಶ್ಯಕವಾದ ವಾದ ವಿವಾದಗಳಿರುತ್ತವೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಗಳು ಕಾಣುತ್ತವೆ.
ಅದೃಷ್ಟ ಸಂಖ್ಯೆ ‌:8, ಅದೃಷ್ಟ ಬಣ್ಣ: ಹಸಿರು

ತುಲಾ ರಾಶಿ : ವ್ಯಾಪಾರ ವ್ಯವಹಾರಗಳಲ್ಲಿ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.ಕುಟುಂಬದಲ್ಲಿ ಮತ್ತೆ ಸೌಹಾರ್ದತೆ ಮೇಳೈಸುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶಗಳ ಮಹಾಪೂರವೇ ಇರುತ್ತದೆ. ನಿಮಗೆ ಒಪ್ಪುವ ಕೆಲಸವನ್ನು ಆಯ್ಕೆ ಮಾಡಲು ವಿಫಲರಾಗುವಿರಿ. ಬದಲಾಗುವ ಮನಸ್ಸಿನ ಕಾರಣ ಸಮಸ್ಯೆಗೆ ಒಳಗಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅತಿ ಮುಖ್ಯ. ಸಾಲವಾಗಿ ಹಣವನ್ನು ಕೊಟ್ಟರೆ ಅಥವಾ ತೆಗೆದುಕೊಂಡರೆ ವಿವಾದವನ್ನು ಎದುರಿಸಬೇಕಾಗುತ್ತದೆ
ಅದೃಷ್ಟ ಸಂಖ್ಯೆ : 3, ಅದೃಷ್ಟ ಬಣ್ಣ: ಕಂದು

ವೃಶ್ಚಿಕ ರಾಶಿ :ಉದ್ಯೋಗದಲ್ಲಿ ಸಹನೆಯಿಂದ ವರ್ತಿಸಿದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಹಿರಿಯ ಅಧಿಕಾರಿಗಳ ಸಹಯೋಗದಲ್ಲಿ ಉದ್ದಿಮೆ ಆರಂಭಿಸುವ ಸಾಧ್ಯತೆ ಇದೆ.ಕುಟುಂಬದ ಸದಸ್ಯರ ಪ್ರೀತಿ ವಿಶ್ವಾಸವನ್ನು ಮರಳಿ ಗಳಿಸುವಿರಿ. ಕುಟುಂಬದ ಜವಾಬ್ದಾರಿ ಕಡಿಮೆಯಾಗಬಹುದು. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲಿದ್ದಾರೆ. ಕಲಿಕೆ ಮುಗಿಯುವ ಮುನ್ನವೇ ಉದ್ಯೋಗ ಮಾಡಬೇಕಾಗಬಹುದು. ದಿನನಿತ್ಯದ ಸಮಸ್ಯೆಗಳು ಕ್ರಮೇಣವಾಗಿ ಬಗೆಹರಿಯಲಿದೆ.
ಅದೃಷ್ಟ ಸಂಖ್ಯೆ : 6, ಅದೃಷ್ಟ ಬಣ್ಣ: ಕೆಂಪು

ಧನು ರಾಶಿ : ಮನಸ್ಸಿಟ್ಟು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಅನಾವಶ್ಯಕವಾದ ವಿಚಾರಗಳಿಗೆ ಸಮಯ ವ್ಯರ್ಥ ಮಾಡುವಿರಿ. ಉದ್ಯೋಗದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಸಣ್ಣ ಪುಟ್ಟ ವಿಚಾರಗಳಿಗೂ ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇರುತ್ತದೆ. ಆತ್ಮೀಯರ ಸಹಾಯದಿಂದ ವ್ಯಾಪಾರ ಆರಂಭಿಸುವಿರಿ.
ಅದೃಷ್ಟ ಸಂಖ್ಯೆ : 5, ಅದೃಷ್ಟ ಬಣ್ಣ : ನೇರಳೆ

ಮಕರ ರಾಶಿ : ಉದ್ಯೋಗದಲ್ಲಿ ತೋರುವ ಕಾರ್ಯಕ್ಷಮತೆಯನ್ನು ಮೇಲಧಿಕಾರಿಗಳು ಮೆಚ್ಚಿಕೊಳ್ಳುತ್ತಾರೆ. ಮಾತಿನ ಮೋಡಿಯಿಂದ ಹಣದ ಸಮಸ್ಯೆಯಿಂದ ದೂರವಾಗುವಿರಿ.ಯಶಸ್ಸು ದೊರೆಯುವವರೆಗೂ ತಾಳ್ಮೆಯಿಂದ ವರ್ತಿಸುವಿರಿ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಿಮ್ಮದಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಧಾನಗತಿಯ ಆದಾಯ ದೊರೆಯುತ್ತದೆ. ವಿದ್ಯಾರ್ಥಿಗಳು ನಿಧಾನಗತಿಯಲ್ಲಿ ವಿದ್ಯಾಭ್ಯಾಸದಲ್ಲಿ ಯಶಸ್ಸುಗಳಿಸುತ್ತಾರೆ.
ಅದೃಷ್ಟ ಸಂಖ್ಯೆ : 4, ಅದೃಷ್ಣ ಬಣ್ಣ:ಹಳದಿ

ಕುಂಭ ರಾಶಿ : ಉದ್ಯೋಗದಲ್ಲಿ ನಿಮ್ಮ ತಪ್ಪನ್ನು ಮರೆಮಾಚಲು ಬೇರೆಯವರನ್ನು ಆಶ್ರಯಿಸುವಿರಿ. ಉದ್ಯೋಗ ಬದಲಿಸುವ ಆಸೆ ನೆರವೇರಲಿದೆ. ಅನಾವಶ್ಯಕವಾದ ಮಾನಸಿಕ ಒತ್ತಡ ಕಾಡಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ವಿರುತ್ತದೆ. ವಿದ್ಯಾರ್ಥಿಗಳು ಮನಸ್ಸನ್ನು ಬದಲಾಯಿಸದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಗುಟ್ಟಾಗಿ ಕೆಲಸ ನಿರ್ವಹಿಸುವ ಉಪಾಯ ಯಶಸ್ಸನ್ನು ನೀಡುತ್ತದೆ.
ಅದೃಷ್ಟ ಸಂಖ್ಯೆ : 3, ಅದೃಷ್ಟ ಬಣ್ಣ: ಹಸಿರು

ಮೀನ ರಾಶಿ :ಹಣಕಾಸಿನ ವ್ಯವಹಾರ ಮಾಡುವುದಿಲ್ಲ. ಮನಸ್ಸಿನಲ್ಲಿ ಪರೋಪಕಾರ ಮಾಡುವ ಹಂಬಲ ಇರಲಿದೆ. ಕುಟುಂಬದಲ್ಲಿ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಾರವು.ಉದ್ಯೋಗದಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ.ಕೆಲಸ ಕಾರ್ಯಗಳು ಅಪೂರ್ಣವಾಗುವ ಸಾಧ್ಯತೆ ಕಂಡು ಬರುತ್ತದೆ. ಯಾರಿಗೂ ಕೇಡನ್ನು ಉಂಟು ಮಾಡುವುದಿಲ್ಲ.ವಿದ್ಯಾರ್ಥಿಗಳು ಯಾರೊಂದಿಗೂ ಸುಲಭವಾಗಿ ಸ್ನೇಹ ಬೆಳೆಸುವುದಿಲ್ಲ.
ಅದೃಷ್ಟ ಸಂಖ್ಯೆ :6, ಅದೃಷ್ಟ ಬಣ್ಣ: ನೀಲಿ