ಸುದ್ದಿಬಿಂದು ಬ್ಯೂರೋ
ಮುಂಡಗೋಡ : ಎಎಸ್‌ಐ ಓರ್ಹವರ ಮೇಲೆ ಹಲ್ಲೆ, ಅವಾಚ್ಯ ನಿಂದನೆ ಹಾಗೂ ಚೆಕ್ ಬೌನ್ಸ್ ಪ್ರಕರಣ ಸಬಂಧಿಸಿದಂತೆ ಮಾಜಿ ಶಾಸಕರ ಪುತ್ರ ನೋರ್ವನ್ನ ಬಂಧಿಸಲಾಗಿದೆ.
ಬಾಪು ಗೌಡ ಪಾಟೀಲ್ ಎಂಬಾತನೆ ಬಂಧಿತ ಮಾಜಿ ಶಾಸಕರ ಪುತ್ತನಾಗಿದ್ದಾನೆ.2011ರಲ್ಲಿ ಮುಂಡಗೋಡ ಅರಣ್ಯ ಇಲಾಖೆಯ ಐಬಿಯಲ್ಲಿ ಕುಡಿದ ಮತ್ತಿನಲ್ಲಿ 15 ಜನರ ಜತೆ ಸೇರಿ ಬಾಪು ಗೌಡ ಎಎಸ್‌ಐ ಬಾಲಕೃಷ್ಣ ಪಾಲೇಕರ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆಂದು. ಬಾಪು ಗೌಡ ಪಾಟೀಲ್ ವಿರುದ್ಧ ಸೆಕ್ಷನ್ 353, 141,143, 147, 323, 353, 504, 506,149ನಡಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:-ಅರಬ್ಬೀ ಸಮುದ್ರದಲ್ಲಿ ಗುಂಡಿನ ದಾಳಿ.!
ಪೊಲೀಸರು ಬಾಪು ಗೌಡಗೆ ಸಂಬಂಧಿಸಿದ ವಾಹನ ಹಿಡಿದಿದ್ದ ಹಿನ್ನೆಲೆ ಮುಂಡಗೋಡ ಐಬಿಯಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಬಾಪು ಗೌಡ ಪಾಟೀಲ್ ಹಾಗೂ ಆತನ 15 ಮಂದಿ ಸಹಚರರು ಎಎಸ್‌ಐ ಅವರನ್ನು ದೂಡಿ, ಹಲ್ಲೆ ನಡೆಸಿದ್ದಲ್ಲದೇ, ಅವಾಚ್ಯವಾಗಿ ನಿಂದಿಸಿದ್ದರು.ಎಎಸ್‌ಐ ಬಾಲಕೃಷ್ಣ ತನ್ನ ಕರೆ ಸ್ವೀಕರಿಸಿಲ್ಲ ಎಂದು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಇದರೊಂದಿಗೆ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಎರಡು ಚೆಕ್ ಬೌನ್ಸ್ ಪ್ರಕರಣದಲ್ಲೂ ಬಾಪು ಗೌಡ ಪಾಟೀಲ್ ಆರೋಪಿಯಾಗಿದ್ದರು.
ಪ್ರಕರಣ ಸಂಬಂಧಿಸಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿದರ ವಿಚಾರವಾಗಿ ಎಎಸ್‌ಐ ನ್ಯಾಯಾಲಯದ ಮೆಟ್ಟಿಲೇರಿದ್ದರು.ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯ ಪ್ರತೀ ಪ್ರಕರಣದಲ್ಲೂ ಮೂರು ಮೂರು ಬಾರಿ ವಾರೆಂಟ್ ಹೊರಡಿಸಿದ್ದರು ಬಾಪು ಗೌಡ ಹಾಜರಾಗಿರಲಿಲ್ಲ. ಕಳೆದ 6 ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೇ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದು, ಈತನ ಜತೆಗೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ 14 ಮಂದಿ ಗೆಳೆಯರು ಕೋರ್ಟ್‌ಗೆ ಹಾಜರಾದ್ರೂ ಬಾಪು ಗೌಡ ಮಾತ್ರ ಹಾಜರಾಗಿರಲಿಲ್ಲ.
ಬೆಂಗಳೂರಿನಲ್ಲಿ ಇದ್ದರೂ ವಾರೆಂಟ್ ನೋಟೀಸ್ ನಿರ್ಲಕ್ಷಿಸಿದ್ದರು ಈ ಹಿನ್ನಲೆಯಲ್ಲಿ ಅವರನ್ನ ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಗೆ ಬಾಪು ಗೌಡ ಪಾಟೀಲ್‌ಗೆ ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯ ಬಂಧನ ವಿಧಿಸಿದೆ.