ಸುದ್ದಿಬಿಂದು ಬ್ಯೂರೋ
ಅಂಕೋಲಾ : ಬಹುತೇಕ ಮಂದಿ ಸ್ನಾನ ಮಾಡುವಾಗ ಬಾಗಿಲು ಹಾಕಿಕೊಳ್ಳುವುದು ಸಹಜ ಆದರೆ ಇಲ್ಲೋಬ್ಬ ವಿಕೃತ ನೋರ್ವ ಬಾಗಿಲನ್ನು ಹಾಕಿಕೊಳ್ಳದೆ. ಬಟ್ಟೆಯನ್ನು ತೊಟ್ಟುಕೊಳ್ಳದೆ ಸ್ನಾನ ಮಾಡಲು ಹೋಗಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಹಾಕಿಸಿಕೊಂಡಿದ್ದಾ‌ನೆ. ಇದು ನಡೆದಿರೋದು ಎಲ್ಲಿ ಅಂತೀರಾ ಈ ಸುದ್ದಿ ಪುರ್ತಿ ಓದಿ.

ಬಾಗಿಲು ಹಾಕಿ ಸ್ನಾನ ಮಾಡು ಎಂದು ಹೇಳಿದ್ದಕ್ಕೆ ತನ್ನ ತಮ್ಮನ ಹೆಂಡತಿಯನ್ನೇ ಬೈದು ಎಳೆದಾಡಿದ ಭಾವನ ಮೇಲೆ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಾಕರಮಠದ ಇಸಾಕ್ ಅಹಮ್ಮದ ಶೇಖ (45) ತನ್ನ ತಮ್ಮನ ಹೆಂಡತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು, ನೊಂದ ಮಹಿಳೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಗುಂಡಿನ ದಾಳಿ.!

ಎಫ್.ಐ.ಆರ್. ನಲ್ಲಿ ಏನಿದೆ.. ?
38ರ ಪ್ರಾಯದ ಈ ಮಹಿಳೆ ಪಟ್ಟಣದ ಕಾಕರಮಠದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದು, ಜನವರಿ 29-2024 ರಂದು ಮದ್ಯಾಹ್ನ 1 ಗಂಟೆಗೆ ಗಂಡನ ಅಣ್ಣ ಇಸಾಕ್ ಅಹ್ಮದ ಶೇಖ ಈತ ತನ್ನ ತಮ್ಮನ ಹೆಂಡತಿ ಅಡಿಗೆ ಕೋಣೆಯಲ್ಲಿ ಅಡುಗೆ ಮಾಡುವಾಗ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾತರೂಮಿನಲ್ಲಿ ಬಾಗಿಲು ಹಾಕದೆ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ. ಅದಕ್ಕೆ ಮಹಿಳೆ ಬಾಗಿಲು ಹಾಕಿಕೊಂಡು ಸ್ನಾನ ಮಾಡುವಂತೆ ಆತನಿಗೆ ಹೇಳಿದ್ದಾಳೆ.

ಇಸಾಕ್ ಶೇಖ ಬಟ್ಟೆ ಹಾಕಿಕೊಂಡು ಬಾತರೂಮಿನಿಂದ ಹೊರ ಬಂದು, ನಾನು ಬೆತ್ತಲೆಯಾದರೂ ಸ್ನಾನ ಮಾಡುತ್ತೇನೆ, ಬಟ್ಟೆ ಹಾಕಿಕೊಂಡಾದರೂ ಸ್ನಾನ ಮಾಡುತ್ತೇನೆ ಅದನ್ನು ಕೇಳಲು ನೀನು ಯಾರು..? ಎಂದು ಅವಾಚ್ಯವಾಗಿ ಬೈದು ಕೈ ಹಿಡಿದು ತಿರುಗಿಸಿ. ಎಳೆದು ಅವಮಾನ ಪಡಿಸುತ್ತಿರುವಾಗ, ಗಂಡನ ತಮ್ಮ ಮೋಸಿನ ಶೇಖ ಬಂದು ಜಗಳ ಬಿಡಿಸಿದ್ದಾನೆ.ಆಗ ಈ ದಿವಸ ನೀನು ಬಚಾವಾದೆ ಇನ್ನೊಮ್ಮೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವ ಬೆದರಿಕೆ ಹಾಕಿದ್ದಾನೆಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಇಸಾಕ್ ಅಹಮ್ಮದ ಶೇಖ ಅವರ ವಿರುದ್ಧ ಐಪಿಸಿ 506, 504, 323, 354 ಕಲಂ ಅಡಿಯಲ್ಲಿ ಪಿಎಸೈ ಉದ್ದಪ್ಪ ಧರೆಪ್ಪನವರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.