ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ ;ಕೆಎಸ್ಆರ್ಟಿಸಿ ಬಸ್(ksrtc Bus) ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆಯ ಮೇಲೆ ನಡೆದಿದೆ
ಅಪಘಾತದಲ್ಲಿ ಬೈಕ್ ಸವಾರರಾದ ರಾಘವೇಂದ್ರ ಸೋಮಯ್ಯ ಗೌಡ,ಮಾವಿನಕುರ್ವಾ(34),ಗೌರೀಶ್ ನಾಯ್ಕ್, (25)ಸಂಶಿ,ರಮೇಶ್ ನಾಯ್ಕ್, (22) ಖರ್ವಾ ಮೃತ ಬೈಕ್ ಸವಾರರಾಗಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಬಿಜಾಪುರದಿಂದ ಮಂಗಳೂರಿಗೆ ಹೋಗುತ್ತಿದ್ದು,ಶರಾವತಿ ಸೇತುವೆ ಮೇಲೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಮೂರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹೊನ್ನಾವರ ಪಿಎಸ್ಐ ಮಂಜುನಾಥ ಗೌಡ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಮನಿಸಿ
- ಮಧ್ಯರಾತ್ರಿಯಿಂದಲೇ ಬಸ್ ಪ್ರಯಾಣ ದುಬಾರಿ! KSRTC ಪ್ರಯಾಣಿಕರಿಗೆ ಮತ್ತಷ್ಟು ಹೊರೆ
- ಉತ್ತರ ಕನ್ನಡದಲ್ಲಿ ಅಕ್ರಮ ಮದ್ಯ ಮಾರಾಟ,ಓಸಿ ಜೂಜಾಟದ ವಿರುದ್ಧ ಪೊಲೀಸರ ದಾಳಿ! ಕಾರವಾರ,ಕುಮಟಾ,ಗೋಕರ್ಣ,ಮುಂಡಗೋಡದಲ್ಲಿ ಪ್ರತ್ಯೇಕ ಪ್ರಕರಣ
- ಬಸ್ ಪ್ರಯಾಣ ದರ ಹೆಚ್ಚಳ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೊರೆ: ರೂಪಾಲಿ ಎಸ್. ನಾಯ್ಕ ಖಂಡನೆ
- ಬೇಡ್ತಿ–ವರದಾ ನದಿ ಜೋಡಣೆ ಡಿಪಿಆರ್ ಸ್ಥಗಿತಕ್ಕೆ ರಾಜ್ಯ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು!

