ಸುದ್ದಿಬಿಂದು ಬ್ಯೂರೋ
ಶಿರಸಿ :ತಾಲೂಕಿನ ಕೊಲಕಗಿಬಿಸಿಯಲ್ಲಿ ಪೈಬರ್ ಪ್ಯಾಕ್ಟ್ರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿರುವ ಘಟನೆ ನಡೆದಿದೆ.

ರಾಘವ ವಿಶ್ವೇಶ್ವರ ಹೆಗಡೆ ಮಶಿಗದ್ದೆ ಇವರಿಗೆ ಸೇರಿದ ಪ್ಯಾಕ್ಟ್ರಿದಾಗಿದ್ದು, ಬೆಂಕಿ ನೆನಸಲು ಅಗ್ನಿ ಶಾಮಕ ದಳದಿಂದ ಹರಸಾಹಸ.ಗ್ರಾಮಸ್ಥರಿಂದಲೂ ಬೆಂಕಿ ನೆನಸಲು ಹರಸಾಹ ಪಡುತ್ತಿದ್ದಾರೆ.

ಬೆಂಕಿಯಿಂದಾಗಿ ಫ್ಯಾಕ್ಟರಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸುತ್ತಿದ್ದಾರೆ. ಇನ್ನೂ ಪ್ಯಾಕ್ಟರಿ ಸುತ್ತಮುತ್ತ ಅಡಿಕೆ ತೋಟವಿದ್ದು, ತೋಟಕ್ಕು ಬೆಂಕಿ ತಗಲುವ ಆತಂಕ ಎದುರಾಗಿದೆ..ಅಡಿಕೆ ತೋಟ ಉಳಿಸಿಕೊಳ್ಳಲು ಗ್ರಾಮಸ್ಥರ ಪರದಾಟ ನಡೆಸುತ್ತಿದ್ದಾರೆ‌