ಸುದ್ದಿಬಿಂದು ಬ್ಯೂರೋ
ಕುಮಟ : ವಿವಾಹಿತ ಮಹಿಳೆ ಓರ್ವಳು ತನ್ನ ಇಬ್ಬರೂ ಮಕ್ಕಳನ್ನ ಬಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಹೆಡ್ ಬಂದರ್ ಬಳಿ ನಡೆದಿದೆ
.

ನಿವೇದಿತಾ ನಾಗರಾಜ ಭಂಡಾರಿ ಎಂಬಾಕೆಯೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಮಹಿಳೆಯಾಗಿದ್ದಾಳೆ.ತೊರಗೋಡ ಸಾಂತಗಲ್ಲ ನಿವಾಸಿಯಾಗಿದ್ದಾಳೆ. ಈಕೆ ಮನೆಯಿಂದ ಬರುವಾಗ ತನ್ನ ಇಬ್ಬರೂ ಗಂಡುಮಕ್ಕನ್ನ ಸ್ಕೂಟಿಯಲ್ಲಿ ಕುಮಟಾ ಪಟ್ಟಣಕ್ಕೆ ಕರೆದುಕೊಂಡು ಬಂದಿದ್ದಾಳೆ.

ಕುಮಟಾ ಪಟ್ಟಣದ ಪಿಕಪ್ ಬಸ್ ನಿಲ್ದಾಣದವರಗೆ ಬಂದ‌ ಮಹಿಳೆ ತನ್ನ ಇಬ್ಬರೂ ಮಕ್ಕಳಿಗೆ ಪಿಕಪ್‌ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಇಲ್ಲೆ ನಿಂತಿರಿ ನಾನು ಗೆಳತಿಯ ಮನೆಗೆ ಹೋಗಿ ಐದು ನಿಮಿಷದಲ್ಲಿ ವಾಪಸ್ ಬರುತ್ತೇನೆ ಎಂದು ಹೇಳಿ ಹೋದವಳು ವಾಪಸ್ ಮಕ್ಕಳಿರುವ ಸ್ಥಳಕ್ಕೆ ವಾಪಸ್ ಬಾರದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ‌ಮಾಡಿಕೊಂಡಿದ್ದಾಳೆ‌ ಎನ್ನಲಾಗಿದೆ.

ಈಕೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಂಗಲ್ಯ ಸರ, ಕಾಲ ಉಂಗುರ ಮೊಬೈಲ್ ಸೇರಿ‌ ಎಲ್ಲವನ್ನ ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟು, ಕೀ ಸ್ಕೂಟಿಗೆ ಹಾಕಿ ಸಮುದ್ರಕ್ಕೆ ಹಾರಿದ್ದಾಳೆ. ಆಕೆ ಸಮುದ್ರಕ್ಕೆ ಹಾರಿರುವುದನ್ನ ಗಮನಿಸಿದ ಅಲ್ಲಿನ ಲೈಪ್ ಗಾರ್ಡ್ ಸಿಬ್ಬಂದಿ ಉದಯ ಹರಿಕಾಂತ ಮಹಿಳೆಯ ರಕ್ಷಣೆಗೆ ಮುಂದಾದರು ಸಹ ಅಲೆಯ ಅಬ್ಬರ ಜೊರಾಗಿರುವುದರಿಂದ ಕೈಗೆ ಸಿಗದೆ ಕೊಚ್ಚಿಕೊಂಡು ಹೋಗಿದ್ದಾಳೆ. ಸುದ್ದಿ ತಿಳಿದ ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ‌ ಹುಡುಕಾಟ ನಡೆಸುತ್ತಿದ್ದಾರೆ.