ಸುದ್ದಿಬಿಂದು ಬ್ಯೂರೋ
ಕಾರವಾರ
: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಕನ್ನಡ ಜಿಲ್ಲೆಯ ಕದ್ರಾ ಜಲಾಶಯ(Kadra Reservoir )ಭರ್ತಿಯಾಗಿದ್ದು, ಈ ಹಿನ್ನಲೆಯಲ್ಲಿ ಜಲಾಶಯದಿಂದ 5000ಕ್ಯೂಸೆಕ್ ನೀರನ್ನ ಕಾಳಿ ನದಿಗೆ ಹರಿ ಬಿಡಲಾಗಿದೆ.

ಕಾರವಾರ(Karwar) ತಾಲೂಕಿನ ಕದ್ರಾ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕದ್ರಾ ಜಲಾಶಯ 34.50ಗರಿಷ್ಠ‌ ಮಟ್ಟವನ್ನ ಹೊಂದಿದೆ.ಈಗಾಗಲೆ 31.ಮೀಟರ್ ನೀರಿನ ಒಳಹರಿವು ಹೆಚ್ಚಾಗಿದ್ದರಿಂದ ಜಲಾಶಯದಿಂದ ಕಾಳಿ ನದಿಗೆ ಹರಿಬಿಡಲಾಗಿದೆ.

ಇನ್ನೂ ಜಲಾಶಯದಿಂದ ನೀರನ್ನ ಹೊರ ಬಿಟ್ಟ ಕಾರಣ ಕದ್ರಾ ಜಲಾಶಯ ವ್ಯಾಪ್ತಿಯ ನಿವಾಸಿಗಳು ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಸೂಚನೆ ನೀಡಲಾಗಿದೆ.(Warning) ಮಳೆ‌ ಪ್ರಮಾಣ ಇನ್ನೂ ಹೆಚ್ಚುತ್ತಾ ಹೋದಲ್ಲಿ ಇನ್ನಷ್ಟು ಗೇಟ್ ಗಳ‌ ಮೂಲಕ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುವ ಸಾಧ್ಯತೆ ಇದೆ.