ಸುದ್ದಿಬಿಂದು ಬ್ಯೂರೋ
ಬೆಂಗಳೂರು
: ಒಂದಲ್ಲಾ ಒಂದು ವಸ್ತುವಿನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ರಾಜ್ಯದ ಜನಕ್ಕೆ ಇದೀಗ ಸರಕಾರ‌ ಮತ್ತೆ ನಂದಿನಿ ಹಾಲಿನ ದರವನ್ನ ಏರಿಕೆ(Milk price increase)ಮಾಡಲು ತಾತ್ವಿಕ ಒಪ್ಪಿಗೆ ನೀಡಿರುವುದು ಜನರಿಗೆ ಹಾಲು ಖರೀದಿ ಮಾಡುವುದು ಬಿಸಿಯಾದಂತಾಗಿದೆ.

ಅಗಸ್ಟ್ 1 ರಿಂದ ಒಂದು ಲೀಟರ್ (liter price) ನಂದಿನಿ ಹಾಲಿಗೆ 3 ರೂಪಾಯಿ ಏರಿಕೆ ಯಾಗಲಿದೆ., ಇದಕ್ಕೆ ಸಚಿವ ಸಂಪುಟದ(Cabinet)ಒಪ್ಪಿಗೆ ಪಡೆದು ಜಾರಿ ಮಾಡಲಾಗುವುದು ಎಂದು ಹಾಲು ಒಕ್ಕೂಟ ಸಭೆಯಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddarmaya)ಅವರ ನೇತೃತ್ವದಲ್ಲಿ ರಾಜ್ಯದಲ್ಲಿನ ಎಲ್ಲಾ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ (Kmf)ಅಧ್ಯಕ್ಷರ ಸಭೆ ನಡೆಸಿದ ನಂತರ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಈ ವಿಚಾರ ಸ್ಪಷ್ಟಪಡಿಸಿದ್ದಾರೆ.

ಇದೀಗ ಕೇವಲ ನಂದಿನಿ ಹಾಲಿನ(Nandini Milk)ದರ ಜಾಸ್ತಿ ಮಾಡಲು ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಹಾಲಿನ ಉಪ ಉತ್ಪನ್ನಗಳ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹಾಲಿನ ಪುಡಿ ದರ ಏರಿಕೆಗೂ ಪ್ರಸ್ತಾವನೆ ಇಡಲಾಗಿದೆ ಎಂದು ವಿವರಿಸಿದರು.

ಸಿಎಂ ಗೆ ಭೇಟಿ(Chief Minister visit) ಮಾಡಿ, ರೈತರು, ಉತ್ಪಾದಕರಿಗೆ ಅನುಕೂಲವಾಗುವಂತೆ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದೇವು, ಅತಿ ಕಡಿಮೆ ಬೆಲೆ ಹಾಲು ಮಾರಾಟ ರಾಜ್ಯದಲ್ಲಿ ಆಗುತ್ತೆ ಎಲ್ಲಾ ಅಧ್ಯಕ್ಷರ, ಕೆಎಂಎಫ್ ಪದಾದಿಕಾರಿಗಳು ಸಿಎಂ ಮೇಲೆ ಹಾಲಿನ ದರ ಹೆಚ್ಚಳಕ್ಕೆ ಒತ್ತಡ ಹಾಕಿದ್ದಾರೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.

ಪ್ರತಿದಿನ 94 ಲಕ್ಷ ಲೀಟರ್ (94 lakhs liter) ಗೂ ಹೆಚ್ಚು ಹಾಲು ಉತ್ಪಾದನೆಯಾಗಲಿದೆ. ಪ್ರಸ್ತುತ ಎಲ್ಲಾ ಒಕ್ಕೂಟಗಳು ಲಾಭದಲ್ಲಿ ಕೆಲಸ ಮಾಡುತ್ತಿವೆ, ಹಾಲು ಉತ್ಪಾದನೆ ಮಾಡುವ ರೈತರಿಗೆ ಲಾಭ ಮಾಡುವ ಉದ್ದೇಶ ನಮ್ಮದಾಗಿದೆ ಎಂದರು. ಕ್ಷೀರ ಭಾಗ್ಯ ಲಾಂಚ್ ಆಗಿ 10 ವರ್ಷ (Ten years)ಆದ ಹಿನ್ನಲೆಯಲ್ಲಿ ದಶಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ, ನಮ್ಮ ರಾಜ್ಯದಲ್ಲಿ ಪ್ರತಿ ಲೀಟರ್ ಗೆ ಸಾಮಾನ್ಯ ಹಾಲು 39 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ, ಇದು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ಅತೀ ಕಡಿಮೆ ದರವಾಗಿದೆ ಎಂದಿದ್ದಾರೆ‌ ಸಚಿವರು.