ಸುದ್ದಿಬಿಂದು ಬ್ಯೂರೋ
ಬೆಂಗಳೂರು
: ಸಿಎಂ ಸಿದ್ದರಾಮಯ್ಯನವರ ಕನಸಿನ ಯೋಜನೆಯಾದ ಅನ್ನಭಾಗ್ಯ ಜುಲೈ 1 (ನಿನ್ನೆಯಿಂದ) ಜಾರಿಗೆ ಬಂದಿದೆ. ಈ ಹಿಂದೆ ನೀಡಲಾಗುತ್ತಿದ್ದ ಅಕ್ಕಿ ಜೊತೆಗೆ ಹೆಚ್ಚುವರಿಯಾಗಿ ಇನ್ನೂ ಐದು ಕೆಜಿ ಅಕ್ಕಿ ನೀಡುವುದಾಗಿ ರಾಜ್ಯ ವಿಧಾನಸಭಾ ಚುನಾವಣಾ ಪೂರ್ವ‌ ಕಾಂಗ್ರೆಸ್ ಘೋಷಣೆ ಮಾಡಿತು. ಆದರೆ ಅಕ್ಕಿ ಕೊರತೆ ಹಿನ್ನಲೆಯಲ್ಲಿ ಅಕ್ಕಿ ಬದಲು ಅವರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲು ತೀರ್ಮಾನಿಸಲಾಗಿದ್ದು, ಇದರಿಂದಾಗಿ ಸರಕಾರಕ್ಕೆ ನಷ್ಟದ ಬದಲಿಗೆ ಲಾಭವಾಗಲಿದೆ.

ಜೂನ್ ಒಂದರಿಂದಲ್ಲೆ ಇದರ ಲಾಭ ಸಿಗಲಿದೆ ಎಂದು ಜನ ತಿಳಿದುಕೊಂಡಿದ್ದರು. ಆದರೆ ಜೂನ್ 01ರ ಬದಲಿಗೆ ಜೂನ್ 10ರಿಂದ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ದಾರರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಈಗಾಗಲೆ ಸಿ ಎಂ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ.

ಸರಕಾರ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಬದಲು ಹಣ ನೀಡಿದರೆ ಸರಕಾರಕ್ಕೆ ದೊಡ್ಡ ಮೊತ್ತದ ಲಾಭ ಆಗಲಿದೆ. ಖಾತೆಗೆ ಹಣ ಜಮಾ ಮಾಡುವುದರಿಂದ ಸರಿಸುಮಾರು 123 ಕೋಟಿ ರೂಪಾಯಿ ಪ್ರತಿ ತಿಂಗಳು ಉಳಿತಾಯವಾಗಲಿದೆ.
ರಾಜ್ಯದಲ್ಲಿ ಒಟ್ಟು 1.14 ಕೋಟಿ ಪಡಿತರಚೀಟಿದಾರರಿದ್ದು, ಅದರಲ್ಲಿ, 4.30 ಕೋಟಿ ಫಲಾನುಭವಿಗಳಿದ್ದಾರೆ. ಒಬ್ಬರಿಗೆ 5 ಕೆಜಿಯಂತೆ ಅಕ್ಕಿ ಹಂಚಿಕೆ ಮಾಡಲು 2.28ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಅಕ್ಕಿ ಕೊರತೆ ಇರುವ ಕಾರಣ ಪ್ರತಿಯೊಬ್ಬರೆ ಐದು ಕೆಜಿ ಅಕ್ಕಿ ಹಣ 170 ರೂಪಾಯಿ ನೀಡಲು ತೀರ್ಮಾನಿಸಲಾಗಿದೆ.

ಇದರಿಂದಾಗಿ ಕಮೀಷನ್, ಸಾಗಾಣಿಕೆ‌ ವೆಚ್ಚ ಎಲ್ಲವನ್ನ ಲೆಕ್ಕ ಹಾಕಿದ್ದರೆ. ತಿಂಗಳಿಗೆ 123ಕೋಟಿ ಹಣ ಸರಕಾರಕ್ಕೆ ಲಾಭವಾಗಲಿದೆ. ಹಣ ವರ್ಗಾವಣೆ ‌ಮಾಡಲು ತಿಂಗಳು 733 ಕೋಟಿ ರೂಪಾಯಿ ಸರ್ಕಾರಕ್ಕೆ ವೆಚ್ಚವಾಗಲಿದೆ. ಇನ್ನು ಅಕ್ಕಿಯನ್ನ ವಿತರಣೆ ಮಾಡುವುದಾಗಿದ್ದರೆ ಅದರ ಖರ್ಚು 856 ಕೋಟಿ ರೂಪಾಯಿ ಆಗುತ್ತಿತ್ತು. ಅಕ್ಕಿ ಸಾಗಟ ವೆಚ್ಚ, ಸಗಟು ಮತ್ತು ಚಿಲ್ಲರೆ ಕಮೀಷನ್ ನೀಡಬೇಕಿತ್ತು. ಸಾಗಣೆ ವೆಚ್ಚವೆ ಪ್ರತಿ ಒಂದು ಕೆಜಿಗೆ 1.10 ರೂಪಾಯಿ ಆಗುತ್ತದೆ.

ಸಗಟು ಕಮೀಷನ್ 35 ಪೈಸೆ ಹಾಗೂ ಚಿಲ್ಲರೆ ಕಮೀಷನ್ 1.84 ರೂ. ನೀಡಲಾಗುತ್ತಿತ್ತು. ಖಾತೆಗೆ ಹಣ ಜಮಾ‌ ಮಾಡುವುದರಿಂದ ಪ್ರತಿ ಕೆಜಿಗೆ 2.69 ಪೈಸೆ ಸರ್ಕಾರಕ್ಕೆ ಉಳಿತಾಯವಾಗಲಿದ್ದು, ಇವೇಲ್ಲವನ್ನ ಅಳೆದು ತೂಗಿ ಲೆಕ್ಕಾಚಾರ‌ ಮಾಡಿಯೇ ರಾಜ್ಯ ಸರಕಾರ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ. ಇದರಿಂದಾಗಿ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವುದು ಸಹ ತಪ್ಪಿದಂತೆ ಆಗಲಿದೆ.