ಅಕ್ಟೋಬರ್ 14 ರ ಶನಿವಾರ ಸಂಭವಿಸಲಿದೆ. ಈ ಸೂರ್ಯಗ್ರಹಣವು ಉಂಗುರಾಕಾರದಲ್ಲಿರುತ್ತದೆ. ಇದರಲ್ಲಿ ಸೂರ್ಯನು ಉಂಗುರದ ಆಕಾರದಲ್ಲಿ ಆಕಾಶದಲ್ಲಿ ಕಾಣಿಸುತ್ತಾನೆ. ಆದ್ದರಿಂದ ಇದನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ. ಸೂರ್ಯ ಗ್ರಹಣ 2023 ರ ಸಮಯ ಮತ್ತು ಸೂತಕ ಕಾಲದ ಬಗ್ಗೆ ಮಾಹಿತಿ ಹೀಗಿದೆ.

ಸೂರ್ಯ ಗ್ರಹಣದ ದಿನದಂದೇ ಸರ್ವಪಿತೃ ಅಮಾವಾಸ್ಯೆಯೂ ಇರುತ್ತದೆ. ಸರ್ವ ಪಿತೃ ಅಮಾವಾಸ್ಯೆಯೊಂದಿಗೆ, 16 ದಿನಗಳ ಶ್ರಾದ್ಧ ಪಕ್ಷವು ಕೊನೆಗೊಳ್ಳುತ್ತದೆ. ಆದಾಗ್ಯೂ, ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಇದರಿಂದಾಗಿ ಶ್ರಾದ್ಧ ಆಚರಣೆಗಳು ಮತ್ತು ಅಮಾವಾಸ್ಯೆಗೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೆ ಯಾವುದೇ ನಿಷೇಧವಿರುವುದಿಲ್ಲ. ಪಂಚಾಂಗದ ಪ್ರಕಾರ, ಅಕ್ಟೋಬರ್ 14 ರಂದು ಸೂರ್ಯಗ್ರಹಣವು ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಅಶ್ವಿನ ಮಾಸದ ಅಮಾವಾಸ್ಯೆಯಂದು ಸಂಭವಿಸುತ್ತದೆ.

ಅಕ್ಟೋಬರ್ 14 ರಂದು ರಾತ್ರಿ 8:34 ಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಲಿದ್ದು, ಅಕ್ಟೋಬರ್‌ 15 ರಂದು ಮಧ್ಯಾಹ್ನ 2:25 ಕ್ಕೆ ಕೊನೆಗೊಳ್ಳಲಿದೆ. ಇನ್ನೂ ಇದೇ ತಿಂಗಳ ಹದಿನೈದು ದಿನಗಳ ಅಂತರದ ಅವಧಿಯಲ್ಲಿ ಚಂದ್ರಗ್ರಹಣ ಕೂಡ ಸಂಭವಿಸಲಿದೆ. ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 28, 29 ರಂದು ನಡೆಯುತ್ತದೆ.

ಈ ಗ್ರಹಣ ಭಾರತದಲ್ಲಿ ಸಂಭವಿಸಲಿದೆ, ಚಂದ್ರನು ಭಾರತೀಯ ಕಾಲಮಾನ 1.06 ಮತ್ತು 2.23ರ ನಡುವೆ ಭೂಮಿಯ ನೆರಳಿನ ಮೂಲಕ ಹಾದುಹೋದಾಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ.

ಶ್ರೀ ಶಕೆ 1945 ಶೋಭಕೃತನಾಮ ಸಂವತ್ಸರ, ಭಾದ್ರಪದ ಬಹುಳ ಮಹಾನವಮಿ ಅಮವಾಸ್ಯೆಯಂದು ಶನಿವಾರ ಖಂಡಗ್ರಾಸ ಅದೃಶ್ಯ ಸೂರ್ಯ ಗ್ರಹಣ ಉಂಟಾಗುತ್ತದೆ. ಗ್ರಹಣ ಯಾವ ಸಮಯಕ್ಕೆ ಆರಂಭವಾಗಿ ಯಾವ ಸಮಯದಲ್ಲಿ ಮುಕ್ತಾಯವಾಗಲಿದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ನ ಇಲ್ಲಿದೆ.

ಸ್ಪರ್ಶಕಾಲ: ರಾತ್ರಿ 09:41, ಮಧ್ಯಕಾಲ: ರಾತ್ರಿ 11:30
ಮೋಕ್ಷ ಕಾಲ: ರಾತ್ರಿ 01: 19 ರ ವರೆಗೆ
ಒಟ್ಟು ಗ್ರಹಣ ಅವಧಿ: 3 ತಾಸು 8 ನಿಮಿಷ,, ಇದು ಭಾರತದಲ್ಲಿ ಕಾಣಿಸುವುದಿಲ್ಲ!.ಈ ಗ್ರಹಣ ದ ವೇದಾದಿ ನಿಯಮ ಪಾಲಿಸಬೇಕೆ ? ಈ ಗ್ರಹಣವು ಭಾರತದಲ್ಲಿ ಕಾಣಿಸುವುದಿಲ್ಲ ಆದ್ದರಿಂದ ವೇದಾದಿ ನಿಯಮ ಪಾಲಿಸುವ ಅವಶ್ಯಕತೆ ಇಲ್ಲ.