ಸುದ್ದಿಬಿಂದು ಬ್ಯೂರೋ
ಶಿರಸಿ : ಟಿಕೆಟ್ ಸಿಗದ ಹಿನ್ನಲೆಯಲ್ಲಿ ಚಿತ್ರದುರ್ಗದ ಬಿಜೆಪಿಯ ಶಾಸಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗದ ಬಿಜೆಪಿ ಶಾಸಕನಾಗಿದ್ದ ಗೂಳಿಹಟ್ಟಿ ಶೇಖರ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈ ತಪ್ಪಿಸಲಾಗಿದೆ. ಇದರಿಂದ ಅಸಮಾಧನಕ್ಕೆ ಒಳಗಾಗಿರುವ ಗೂಳಿಹಟ್ಟಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ‌ನೀಡುವ ಸಾಧ್ಯತೆ ಇದೆ.

ಇನ್ನೂ ಕೆಲ ಸಮಯದಲ್ಲಿ‌ ಚಿತ್ರದುರ್ಗದಿಂದ ತನ್ನ ‌ಬೆಂಬಲಿಗರೊಂದಿಗೆ ಶಿರಸಿಗೆ ಆಗಮಿಸಲಿರುವ ಗೂಳಿಹಟ್ಟಿ ಶೇಖರ್ ವಿಧಾನಸಭಾಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ.‌ಇವರು ಬಿಜೆಪಿಯನ್ನ ತೊರೆದು ರೆಡ್ಡಿ ಅವರ ಪಕ್ಷದಿಂದ ಚಿತ್ರದುರ್ಗದಿಂದಲೇ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.