ಸುದ್ದಿಬಿಂದು ಬ್ಯೂರೋ
ಹೊನ್ನಾವರ
: ಚುನಾವಣಾಧಿಕಾರಿಗಳು ಚೆಕ್ ಪೊಸ್ಟ್ ನಲ್ಲಿ ತಪಾಸಣೆ ಮಾಡುತ್ತಿದ್ದ ವೇಳೆ ಆಟೋ ಒಂದರಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ ಕೋಟ್ಯಾಂತರ ರೂಪಾಯಿ ಹಣ ಪತ್ತೆಯಾಗಿದ್ದು, ಆರೋಪಿ ಹಾಗೂ ಆಟೋ ವಶಕ್ಕೆ ಪಡೆದುಕೊಂಡ‌ ಘಟನೆ ಚೆಂದಾವರದ ಚೆಕ್ ಪೊಸ್ಟ್ ಬಳಿ ಬೆಳಗ್ಗಿನ ಜಾವ ನಡೆದಿದೆ.

ಶಿವಮೊಗ್ಗದಿಂದ ಕುಮಟಾಕ್ಕೆ ಆಟೋದಲ್ಲಿ ಹಣ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಈ ವೇಳೆ ಚೆಂದಾವರದ ಅರಣ್ಯ ಇಲಾಕೆ ಚೆಕ್ ಪೊಸ್ಟ್ ನಲ್ಲಿ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವ ವೇಳೆ ಕೋಟ್ಯಾಂತರ ರೂಪಾಯಿ ಪತ್ತೆಯಾಗಿದೆ. ಮತದಾರರಿಗೆ ಹಂಚಿಕೆ ಮಾಡಲು‌ ಕೋಟ್ಯಾಂತರ ಹಣ ತರಲಾಗುತ್ತಿತ್ತು ಎನ್ನಲಾಗಿದೆ.

ಈ ಹಣ ಕುಮಟಾ ವಿಧಾನಸಭಾ‌ ಕ್ಷೇತ್ರ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಓರ್ವರಿಗೆ ತಲುಪಿಸಲು ಶಿವಮೊಗ್ಗದಿಂದ ಆಟೋದಲ್ಲಿ ತರಲಾಗುತ್ತಿತ್ತು ಎನ್ನಲಾಗಿದೆ.ಈಗಾಗಲೇ ಎಲ್ಲಾ ಹಣವನ್ನ ಚುನಾವಣಾ ಅಧಿಕಾರಗಳು ವಶಕ್ಕೆ ಪಡೆದುಕೊಂಡಿದ್ದು, ಇನ್ನೂ ಆಟೋ ಚಾಲಕನನ್ನ ಹೊನ್ನಾವರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದು, ವಿಚಾರಣೆ ಬಳಿಕ ಈ ಹಣ ಯಾವ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೆ ತಲುಪಿಸು ಸಾಗಾಟ ಮಾಡಲಾಗುತ್ತಿತ್ತು ಎನ್ನುವುದು ಬಹಿರಂಗವಾಗಬೇಕಿದೆ.