ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಪತ್ನಿಯೊಂದಿಗೆ ಶಿರಸಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಸಾಗರ ಮೂಲದ ವ್ಯಕ್ತಿ ಓರ್ವನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಕೊಲೆಯಾದ ಅರ್ಧಗಂಟೆಯಲ್ಲೆ ಕೊಲೆ ಪಾತಕಿಯನ್ನ ಪೊಲೀಸರು ಬಂಧಿಸಿದ್ದಾರೆ
ಗಂಗಾಧರ ಕೊಲೆಯಾದ ದುರ್ದೈವಿಯಾಗಿದ್ದಾನೆ ಈತ.. ತನ್ನ ಪತ್ನಿಯೊಂದಿಗೆ ಶಿರಸಿ ಯಿಂದ ಬಸ್ ಹತ್ತಿ ಬೆಂಗಳೂರು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇಬ್ಬರೂಮದುವೆಯಾಗಿ ಆರು ತಿಂಗಳು ಮಾತ್ರ ಕಳೆದಿದ್ದು,ಸಾಗರ ಮೂಲದ ಗಾಂಗಾಧರ. ಶಿರಸಿಯ ಅಚ್ಚನಳ್ಳಿಯ ಯುವತಿಯನ್ನ ಮದುವೆಯಾಗಿದ್ದ,ನಿನ್ನೆ ಕಾರ್ಯಕ್ರಮದ ನಿಮಿತ್ತ ಶಿರಸಿ ಅಚ್ಚನಳ್ಳಿಯಲ್ಲಿರುವ ಮಾವನ ಮನೆಗೆ ದಂಪತಿಗಳು ಆಗಮಿಸಿದ್ದರು. ಇಂದು ಕಾರ್ಯಕ್ರಮ ಮುಗಿಸಿ ವಾಪಾಸ್ ಬೆಂಗಳೂರು ತೆರಳುತ್ತಿರುವ ಸಂದರ್ಭದಲ್ಲಿ ಕೊಲೆ ಮಾಡಲಾಗಿದೆ.
ಪ್ರೀತಮ್ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ಈತ ಕೊಲೆ ಮಾಡಿ ಬಸ್ನಿಂದ ಪರಾರಿಯಾದ್ದ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಅರ್ಧ ಗಂಟೆಯಲ್ಲೇ ಕೊಲೆಗಾರನ ಬಂಧನ: ಕೊಲೆಯಾದ ಅರ್ಧ ಗಂಟೆಯಲ್ಲೆ ಕೊಲೆ ಆರೋಪಿಯನ್ನ ಬಂಧಿಸಲಾಗಿದೆ. ಶಿರಸಿ ಸರಕಾರಿ ಆಸ್ಪತ್ರೆ ಬಳಿ ಚಲಿಸುವ ಬಸ್ ನಲ್ಲೇ ಗಂಗಾಧರ ಎಂಬ ಯುವಕನನ್ನು ಕೊಲೆ ಮಾಡಿ ಪರಾರಿಯಾದ ಆರೋಪಿ ಪ್ರೀತಮ ಡಿಸೋಜ, ದುಂಡಶಿನಗರ ಶಿರಸಿ ಎಂಬಾತನನ್ನ ಬಂಧಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ