ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ಗುಡುಗು-ಸಿಡಿಲಿನ ಆರ್ಭಟಕ್ಕೆ ಸಿಲುಕಿ ಏಳು ಜಾನುವಾರುಗಳು ಮೃತಪಟ್ಟಿರುವ ಘಟನೆ ಅಂತ್ರವಳ್ಳಿ ಗ್ರಾಮದಲ್ಲ ನಿನ್ನೆ ನಡೆದಿದೆ.
ಕೃಷ್ಣ ತುಳಸು ಗೌಡ ಅವರಿಗೆ ಸೇರಿದ ಎರಡು ಆಕಳುಗಳು, ಒಂದು ಕರು ಹಾಗೂ ಎರಡು ಗೂಳಿ, ಗಂಗಾಧರ ಸುಗ್ಗಿ ಗೌಡ ಅವರಿಗೆ ಸೇರಿದ ಒಂದು ಆಕಳು ಮತ್ತು ಬೇಡು ನಾಗು ಗೌಡ ಅವರಿಗೆ ಸೇರಿದ ಒಂದು ಆಕಳು ಸೇರಿದಂತೆ ಒಟ್ಟು ಏಳು ಜಾನುವಾರುಗಳು ಸಿಡಿಲಿನ ಹೊಡೆತಕ್ಕೆ ಬಲಿಯಾಗಿವೆ. ನಿನ್ನೆ ಜಾನುವಾರುಗಳನ್ನು ಮೇಯಲು ಬಿಡಲಾಗಿತ್ತು. ಆದರೆ, ರಾತ್ರಿ ಆದರೂ ಅವು ಮನೆಗೆ ಹಿಂತಿರುಗಿರಲಿಲ್ಲ. ಹೀಗಾಗಿ ಅಕ್ಟೋಬರ್ 24ರಂದು ಮುಂಜಾನೆಯಿಂದ ಜಾನುವಾರುಗಳಿಗಾಗಿ ಹುಡುಕಾಟ ನಡೆಸಿದಾಗ, ಮಧ್ಯಾಹ್ನದ ವೇಳೆಗೆ ಅವು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಸ್ಥಳಕ್ಕೆ ಸಂಬಂಧಿಸಿದ ಪಶುವೈದ್ಯರು ಪರಿಶೀಲನೆ ನಡೆಸಿ, ಜಾನುವಾರುಗಳು ಸಿಡಿಲು ಬಡಿದ ಪರಿಣಾಮ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಒಂದೇ ಘಟನೆಯಲ್ಲಿ ಏಳು ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಆರ್ಥಿಕ ನಷ್ಟ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

