ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ ತಾಲೂಕಿನ ಹಳಗಾ ಗ್ರಾಮದ ಪ್ರತಿಷ್ಟಿತ ಶಕ್ತಿ ದೇವರಾದ ಲಕ್ಚ್ಮಿ ನಾರಾಯಣ ದೇವಾಲಯದಲ್ಲಿ ಆಡಳಿತ ಮಂಡಳಿಯಿಂದ ಇತಿಹಾಸದಲ್ಲೆ ಮೊದಲ ಬಾರಿಗೆ ಅಷ್ಟಮಂಗಲ ಪ್ರಶ್ನೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು…

300ವರ್ಷಗಳ ಇತಿಹಾಸ ಹೊಂದಿರುವ ಲಕ್ಷ್ಮಿನಾರಾಯಣ ದೇವಾಲಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಧಾರ್ಮಿಕ ಕಾರ್ಯ ಸರಿಯಾಗಿ ಆಗುತ್ತಿದ್ದೆಯಾ ಅಥವಾ ನೂರಾರು ವರ್ಷಗಳ ಹಿಂದೆ ನಡೆಯುತ್ತಿದ್ದ ಪರಂಪರೆ ಪದ್ಧತಿಗಳು ಮರೆಯಲಾಗಿದ್ದು ಅದು ಹೇಗಿತ್ತು ಮತ್ತು ಮುಂದೆ ಆಚರಣೆಗೆ ತರಬೇಕಾ ಎನ್ನುವ ಬಗ್ಗೆ ತಿಳಿದುಕೊಳ್ಳಲು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಮಾರ ನಾಯ್ಕ್ ಹಾಗು ಪದಾಧಿಕಾರಿಗಳು ಊರಿನ ಹಿರಿಯರು ಚರ್ಚೆ ಮಾಡಿ ಅಷ್ಟಮಂಗಲ ಪ್ರಶ್ನೆ ಕಾರ್ಯ ಹಮ್ಮಿಕೊಂಡರೆ ಪರಿಹಾರ ಸಿಗಬಹುದು ಎಂದು ನಿರ್ಧರಿಸಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು,

ಅಷ್ಟ ಮಂಗಲ ಪ್ರಶ್ನೆಯು ಬರೊಬ್ಬರಿ ನಾಲ್ಕರಿಂದ ಐದು ತಾಸುಗಳ ಕಾಲ ನಡೆಯಿತು, ದೇವಾಲಯದಲ್ಲಿ ಇದ್ದ ಹಲವು ಲೋಪದೋಷಗಳು ಕಂಡು ಬಂದಿದ್ದು ಇದಕ್ಕೆ ಪರಿಹಾರಾರ್ಥವಾಗಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಮಾಡಲು ಅಷ್ಟಮಂಗಲ ಅರ್ಚಕರಾದ ನಾಗಾನಂದ ಭಟ್ ಅವರು ಸೂಚಿಸಿದ್ದಾರೆ ಎನ್ನಲಾಗಿದೆ, 300ವರ್ಷಗಳ ಇತಿಹಾಸ ಹೊಂದಿರುವ ಲಕ್ಷ್ಮಿ ನಾರಾಯಣ ದೇವರ ಹಿಂದಿನ ಪದ್ಧತಿಗೆ ಅನುಸಾರವಾಗಿ ನಡೆದುಕೊಳ್ಳಲು ಪರಿಹಾರ ಸಿಕ್ಕಿದೆ ಎನ್ನಲಾಗಿದೆ..ಈ ಸಂದರ್ಭದಲ್ಲಿ ಊರಿನ ಹಿರಿಯರು, ದೇವಾಲಯದ ಭಕ್ತರು ಉಪಸ್ಥಿತರಿದ್ದರು…

ಇದನ್ನೂ ಓದಿ/ ವಿಶ್ವದ ಕಿರಿಯ ತಬಲಾ ಕಲಾವಿದೆ ಸ್ವರಶ್ರೀಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ

ವಿಶ್ವದ ಕಿರಿಯ ತಬಲಾ ಕಲಾವಿದೆ ಸ್ವರಶ್ರೀಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ