ಕಳೆದ ಕೆಲ ದಿನಗಳಿಂದ ಏರಿಕೆಯಾಗುತ್ತಿದ್ದ ಬಂಗಾರದ ಬೆಲೆ ದಸರಾ ಸಮಯದಲ್ಲಿ ಭಾರೀ ಇಳಿಕೆ ಕಂಡಿದೆ. ಕಳೆದ ಮೂರು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,350 ರೂಪಾಯಿ ಇಳಿಕೆಯಾಗಿದ್ದು ಚಿನ್ನ ಖರೀದಿ ಮಾಡುವವರಿಗೆ ಖುಷಿ ತಂದಿದೆ.
ದೆಹಲಿಯ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆಯು 350 ರೂಪಾಯಿ ಇಳಿಕೆಯಾಗಿದ್ದು, 77,350 ರೂಪಾಯಿಗೆ 10 ಗಾಂ ಚಿನ್ನ ಮಾರಾಟವಾಗಿದೆ. ಮೂರು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಭರ್ಜರಿ 1,350 ರೂಪಾಯಿ ಇಳಿಕೆಯಾಗಿದೆ..
ಬೆಳ್ಳಿ ದರದಲ್ಲಿ (Silver price)ಏರಿಕೆ ಮುಂದುವರೆದಿದೆ. ಪ್ರತಿ ಕೆ.ಜಿಗೆ ಬೆಳ್ಳಿಗೆ 300 ರೂಪಾಯಿ ಏರಿಕೆಯಾಗಿದ್ದು, ಕೆ.ಜಿ ಬೆಳ್ಳಿಗೆ 91,500 ಬೆಲೆ ಇದೆ. ಈ ವರ್ಷದ ಆರಂಭದಲ್ಲಿ ಒಂದು ಕೆ.ಜಿ ಬೆಳ್ಳಿ ಬೆಲೆ 75,000 ರೂಪಾಯಿ ಇತ್ತು. ಇದೀಗ ಇದರ ಬೆಲೆ 91,500 ರೂಪಾಯಿಗೆ ಏರಿಕೆಯಾಗಿದೆ. ಇದರೆಗೆ ಬೆಳ್ಳಿದರಲ್ಲಿ , 17,934 ರೂಪಾಯಿ ಏರಿಕೆಯಾಗಿದೆ.
ಈ ವರ್ಷದ ಹಣಕಾಸು ವರ್ಷದವನ್ನ ನೋಡಿದರೆ ಬಂಗಾರದ ಬೆಲೆಯಲ್ಲಿ ಅಂತಹಾ ಇಳಿಕೆಯೇನು ಕಂಡು ಬರುತ್ತಿಲ್ಲ.ಇನ್ನೂ ದೀಪಾವಳಿ ಹತ್ತಿರ ಬರುತ್ತಿರುವುದಿಂದ ಬಂಗಾರದ ದರಲ್ಲಿ ಏರಿಕೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಗಮನಿಸಿ