ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ತಾಲೂಕಿನ ಬಾಡಗ್ರಾಮದಲ್ಲಿ ಅಕ್ರಮವಾಗಿ ಸಾಗಟ ಮಾಡುತ್ತಿದ್ದ ಕಮರಿಪೇಟೆಯ ಕಳಪೆ ದರ್ಜೆಯ ಸರಾಯಿಯನ್ನು ಕರಾವಳಿ ಕಾವಲುಪಡೆ ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಇತ್ತೀಚಿಗೆ ಕಳಪೆ ದರ್ಜೆಯ ಸರಾಯಿ ಕುಡಿದು ಯುವಕರು ಕಡಿಮೆ ವಯಸ್ಸಿನಲ್ಲೇ ಮಣಹೊಂದುತ್ತಿದ್ದಾರೆ ಎಂಬ ಆರೋಪ ಕುಮಟಾ, ಹೊನ್ನಾವರ,ಗೋಕರ್ಣ ಸೇರಿದಂತೆ ಅನೇಕ ಕಡೆ ಕೇಳಿಬಂದಿತ್ತು.ಆ ಹಿನ್ನೆಲೆಯಲ್ಲಿ ಕಳಪೆ ದರ್ಜೆಯ, ಸರಾಯಿ ಮಾರಾಟಗಾರರ ಜಾಲ ಬಹು ದೊಡ್ಡದಾಗಿ ಬೆಳೆದಿದ್ದು,ಈ ಜಾಲ ಬೇದಿಸಲು ಪೋಲಿಸರು ಬಲೆ ಹೆಣೆದಿದ್ದರು.ಇದರ ಪರಿಣಾಮ ಇಂದು ಕುಮಟಾ ತಾಲೂಕಿನ ಬಾಡ ಗ್ರಾಮದಲ್ಲಿ ಕರಾವಳಿ ಕಾವಲು ಪಡೆಯ ಪೋಲಿಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಈ ಕಳಪೆ ದರ್ಜೆಯ ಸರಾಯಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕುಮಟಾ ತಾಲೂಕಿನ ಮೊಸಳೆಸಾಲ ಗ್ರಾಮದ ವ್ಯಕ್ತಿಯನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.ಈತ ಅಕ್ರಮ ಮದ್ಯವನ್ನು ಮಾದರಿರಸ್ತೆ ಮಾರ್ಗವಾಗಿ ಮೊಸಳೆಸಾಲಕ್ಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾರಿ ಮದ್ಯೆಯ. ಕಟ್ಟಿಗೆ ಗಿಡಿಪ್ಪೋ ಬಳಿ ಪೋಲಿಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವ್ಯಕ್ತಿ ಮೊಸಳೆ ಸಾಲದ ಗೂಡಂಗಡಿಯಲ್ಲಿ ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆರೋಗ್ಯಕ್ಕೆ ಹಾನಿಕಾರಕವಾಗಿರುವ ಈ ಅಕ್ರಮ ಮದ್ಯ ತಯಾರಿಕರಿಗೆ ಮುಖ್ಯ ಮಾರಾಟಗಾರರೇ ಹಳ್ಳಿಗಳಲ್ಲಿರುವ ಗೂಡಂಗಡಿ ಕಾರರು,ಈ ಗೂಡಂಗಡಿಕಾರರಿಕೆ ಮುಖ್ಯ ಗಿರಾಕಿಗಳೇ ಬಡವರು, ಹಾಗೂ ಕೂಲಿ ಕಾರ್ಮಿಕರು.ಇವರ ಆರ್ಥಿಕ ಪರಿಸ್ಥಿತಯನ್ನೇ ಬಂಡವಾಳವಾಗಿಸಿಕೊಂಡು ಕಡಿಮೆ ಬೆಲೆಗೆ ಅಕ್ರಮ ಮದ್ಯಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಮೊದಲಿನಿಂದಲ್ಲೂ ಕೇಳಿ ಬರುತ್ತಿದೆ.
ಕಳಪೆ ದರ್ಜೆಯ ಮದ್ಯದ ಹಿನ್ನೆಲೆ :- ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯಿಂದ ರಾಜ್ಯ ಎಲ್ಲಾ ಎಮ್.ಎಸ್.ಐ.ಎಲ್ ಹಾಗೂ ಬಾರ್ ಗಳಿಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ(ksbcl) ಮೂಲಕ ಮದ್ಯ ಸರಬರಾಜು ಮಾಡುತ್ತದೆ. ಕೆ.ಎಸ್.ಬಿ.ಸಿ.ಎಲ್ ಪೂರೈಕೆ ಮಾಡಿದ ಮದ್ಯದ ಹೊರತಾಗಿ ಬೇರೆ ಯಾವುದೇ ಸರಾಯಿ ರಾಜ್ಯದಲ್ಲಿ ಮಾರಾಟವಾದರೆ, ಆ ಮದ್ಯವನ್ನು ಅಕ್ರಮ ಅಥವಾ ಕಳಪೆ ದರ್ಜೆಯ ಮದ್ಯವೆಂದು ಕರೆಯಲಾಗುತ್ತದೆ.
ಕಡಿಮೆ ಅವದಿಯಲ್ಲಿ ಹೆಚ್ಚು ಹಣಗಳಿಸಲು ಅನೇಕ ಮಾರಾಟಗಾರರು ಈ ಕಳಪೆ ದರ್ಜೆ ಮದ್ಯದ ಮೋರೆ ಹೋಗುತ್ತಾರೆ.ಈ ಮದ್ಯವನ್ನು ಕೇವಲ ಸ್ಪಿರೀಟ್ ಹಾಗೂ ಸರಾಯಿ ಪ್ಲೇವರ್ ಮಿಶ್ರಣ ಬಳಸಿ ತಯಾರು ಮಾಡುತ್ತಾರೆ.ಈ ಮದ್ಯ ಆರೋಗ್ಯಕ್ಕೆ ಹಾನಿಕಾರವಾಗಿದ್ದು ಸರ್ಕಾರ ಕಳಪೆ ದರ್ಜೆಯ ಮದ್ಯ ಮಾರಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಗಮನಿಸಿ