suddibindu.in
ಅಂಕೋಲಾ: ತಾಲೂಕಿನಲ್ಲಿ ಬಾಳೆಗುಳಿ ರಾಷ್ಟ್ರೀಯ ಹೆದ್ದಾರಿ 66ರ ವರದರಾಜ ಹೊಟೇಲ್ ಬಳಿ, ಲಾರಿಯ ಚಕ್ರ ಹಾಯ್ದು ,ವ್ಯಕ್ತಿ ಓರ್ವ ಧಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ..
ತಾಲೂಕಿನ ಶಿರಕುಳಿ ಗ್ರಾಮದ ಪ್ರಮೋದ ನಾರಾಯಣ ನಾಯ್ಕ (19 )ಮೃತ ದುರ್ದೈವಿ ಯುವಕನಾಗಿದ್ದಾನೆ. ಈತ ಲಾರಿ ಕ್ಲೀನರ್ ಮತ್ತಿತರ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಇನ್ನೊಂದಯ ಲಾರಿ ಚಕ್ರದಡಿ ಆಕಸ್ಮಿಕವಾಗಿ ಸಿಲುಕಿ ದುರ್ಮರಣ ಮೃತರಾಗಿದ್ದಾರೆ.
ಇದನ್ನೂ ಓದಿ
- ಅರಣ್ಯ ಇಲಾಖೆ ವಿರುದ್ಧ ಅನಂತಮೂರ್ತಿ ಹೆಗಡೆ ಗರಂ
- ಚಿತ್ರದುರ್ಗ ಸೀಬರ್ಡ್ ಬಸ್ ದುರಂತ: ಉತ್ತರ ಕನ್ನಡದ ರಶ್ಮಿ ಮಹಾಲೆ ದುರಂತ ಸಾವು
- ಸೀಬರ್ಡ್ ಬಸ್ ದುರಂತ:ಕುಮಟಾದ ವಿಜಯ್ ಭಂಡಾರಿ ಸೇಫ್, ಮೇಘರಾಜ್,ರಶ್ಮಿ ಸುಳಿವಿಲ್ಲ
ಅಂಕೋಲಾದ ವರದರಾಜ ಹೋಟೆಲ್ ಬಳಿ ಉಪಹಾರ ಸೇವಿಸಿ ಚಲಿಸುತ್ತಿದ್ದರು ಎನ್ನಲಾಗಿದೆ.ಸುದ್ದಿ ತಿಳಿದ ಅಂಕೋಲಾ ಪೊಲೀಸ್ ಠಾಣೆಯ ಸಂಚಾರ ವಿಭಾಗದ ಪಿ. ಎಸ್ ಐ ಸುನೀಲ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಅಪಘಾತ ಪಡಿಸಿದ ವಾಹನ ಚಾಲಕನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ..
ಘಟನಾ ಸ್ಥಳದಿಂದ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಿಲು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ್ ನಾಯ್ಕ, ಸ್ಥಳೀಯರಾದ ದತ್ತು, ಮೃತನ ಕುಟುಂಬ ಸಂಬoಧಿಗಳು, ಮತ್ತಿತರರು ಸಹಕರಿಸಿದರು. ಘಟನಾ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು.







