ಸುದ್ದಿಬಿಂದು ನ್ಯೂಸ್ ಡೆಸ್ಕ್
ಕಾರವಾರ : ದಾಖಲೆ ಇಲ್ಲದೆ ಗೋವಾದಿಂದ ಉಡುಪಿಗೆ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ನಡೆದಿದೆ.

ಗೋವಾದಿಂದ ಉಡುಪಿಗೆ ಸಾಗಿಸುತ್ತಿದ್ದ 8.90 ಲಕ್ಷ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗೋವಾ ಕಾರವಾರ ಗಡಿಯ ಮಾಜಾಳಿಯಲ್ಲಿ ಪೊಲೀಸರು ತಪಾಸಣೆ ಮಾಡುಸಮಯದಲ್ಲಿ ಈ ಹಣ ಪತ್ತೆ ಯಾಗಿದೆ.

ಈ ಹಣ ಉಡುಪಿಯ ಉದ್ಯಮಿ ಅನುಪ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಈಗಾಗಲೆ‌ ಎಲ್ಲಾ ಹಣವನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.