suddibindu.in
Karwar: ಕಾರವಾರ: ಪದ್ಮಶ್ರೀ ತುಳಸಿ ಗೌಡ ಅವರು ಅನಾರೋಗ್ಯದಿಂದಾಗಿ ಅಸ್ವಸ್ಥರಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ತುಳಸಿ ಗೌಡ ಅವರು ನಿನ್ನೆ ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾಗಿದ್ದು, ತೀರಾ ಆರೋಗ್ಯ ಹದಗೆಟ್ಟು ಅಸ್ವಸ್ಥರಾಗಿದ್ದರು. ಇಂದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಯ ತಿಳಿದ ಮಾಧವ ನಾಯಕರು, ಅವರನ್ನು ಜಿಲ್ಲಾ ಆಸ್ಪತ್ರೆಯ ಐ. ಸಿ ಯುನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದರು.
ಇದನ್ನೂ ಓದಿ
- ಕುಮಟಾ ತಾಲೂಕಾ ಪಂಚಾಯತ್ ಕಾಮಗಾರಿ ಟೆಂಡರ್ನಲ್ಲಿ ಅವ್ಯವಹಾರ ಆರೋಪ
- ಡಿಸೆಂಬರ್ 6ಕ್ಕೆ ಉತ್ತರ ಕನ್ನಡಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ
- ಕಾಂಗ್ರೇಸ್ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ
ಶಾಸಕ ಸತೀಶ್ ಸೈಲ್ ಮತ್ತು ಡಾ. ಅಂಜಲಿ ನಿಂಬಾಳ್ಕರ್ ಅವರು ಕೂಡ ವಿಷಯ ತಿಳಿದು ತುಳಸಿ ಗೌಡರ ಆರೋಗ್ಯ ವಿಚಾರಿಸಿದ್ದು, ವೈದ್ಯರಿಂದ ಮಾಹಿತಿ ಪಡೆದು ಉತ್ತಮ ವೈದ್ಯಕೀಯ ಔಷಧೋಪಚಾರ ಮಾಡುವಂತೆ ಸೂಚಿಸಿದ್ದಾರೆ.





