suddibindu.in
ಕಾರವಾರ: ವಿದ್ಯುತ್ ತಂತಿ ತಗುಲಿ ಆನೆಯೊಂದು (elephant) ಸಾವನ್ನಪ್ಪಿರುವ ಶಂಕೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ದೇಹಳ್ಳಿಯಲ್ಲಿ ಇಡ್ಡೆಮನೆಯಲ್ಲಿ ನಡೆದಿದೆ.
ಕಾಡು ಪ್ರಾಣಿಗಳು ತೋಟಕ್ಕೆ ಬಾರದೆಂದು ದೇಹಳ್ಳಿಯಲ್ಲಿ ವ್ಯಕ್ತಿಯೊಬ್ಬರು ತೋಟದ ಸುತ್ತ ವಿದ್ಯುತ್ ಲೈನ್ ಹಾಕಿದ್ದರು ಎನ್ನಲಾಗಿದೆ. ಈ ವೇಳೆ ಕಾಡು ಆನೆಯೊಂದು ತೋಟಕ್ಕೆ ನುಗ್ಗಿದ್ದು ಪರಿಣಾಮ ಅಲ್ಲಿ ಹಾಕಲಾಗಿರುವ ವಿದ್ಯುತ್ ತಂತಿ ತಗುಲಿ ಆನೆ ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಈ ಕುರಿತು ಯಲ್ಲಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ
- ಆರ್ಟಿಐ ಹೆಸರಿನಲ್ಲಿ ಕೋಟಿ ಹಣದ ಬೇಡಿಕೆ: ಮುಂಡಗೋಡ-ಹುಬ್ಬಳ್ಳಿ ಗ್ಯಾಂಗ್ ಪೊಲೀಸ್ ಬಲೆಗೆ..!
- ಐದು ವರ್ಷ ಅಪಘಾತವಿಲ್ಲ.!ಭಟ್ಕಳದ ಚಾಲಕ ರಾಮಚಂದ್ರ ನಾಯ್ಕ ಅವರಿಗೆ ಬೆಳ್ಳಿ ಪದಕದ ಗೌರವ
- ನ್ಯಾಯ ಸಿಗದಿದ್ದರೆ ಬಸ್ಸ್ಟ್ಯಾಂಡ್ನಲ್ಲಿ ಧರಣಿ : ಆಟೋ ಚಾಲಕರಿಂದ ಎಚ್ಚರಿಕೆ
ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಮಗ್ರವಾಗಿರುವ ತನಿಖೆ ಮಾಡುವ ಮೂಲಕ ಕಾಡನೆ ತೋಟಕ್ಕೆ ಹಾಕಿರುವ ವಿದ್ಯುತ್ ಲೈನ್ ತಗುಲಿ ಮೃತಪಟ್ಟಿದೇಯೋ ಇಲ್ಲ.ಆನೆ ನಡೆದುಕೊಂಡು ಹೋಗುವ ಮಾರ್ಗದಲ್ಲೆನಾದ್ದರೂ ವಿದ್ಯುತ್ ಲೈನ್ ಹರಿದು ಬಿದ್ದು, ಆನೆಗೆ ತಗುಲಿ ಮೃತಪಟ್ಟಿದೇಯಾ ಎನ್ನುವ ಬಗ್ಗೆ ತನಿಖೆ ನಡೆಸಬೇಕಿದೆ. ಒಂದು ವೇಳೆ ತೋಟಕ್ಕೆ ಹಾಕಿರುವ ವಿದ್ಯುತ್ ಲೈನ್ ತಗುಲಿ ಆನೆ ಮೃತಪಟ್ಟಿರುವುದು ಹೌದಾಗಿದಲ್ಲಿ.. ತೋಟದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.





