ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :: 2025-26ನೇ ಸಾಲಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವಂತೆ ಆದೇಶಿಸಲಾಗಿದೆ.
2025-26ನೇ ಸಾಲಿನ ಶೈಕ್ಷಣಿಕ ಅವಧಿ ಪ್ರಾರಂಭವಾಗಿದ್ದು ಪ್ರಾಥಮಿಕ ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳು ಬಸ್ ಪಾಸ್‌ಗಾಗಿ ಇ.ಡಿ.ಸಿ.ಎಸ್ ಇಲಾಖೆಯ ಸೇವಾಸಿಂಧು ಮುಖೇನ ಸಂಸ್ಥೆಯ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಿ ಕರ್ನಾಟಕ-1/ಗ್ರಾಮ-1 ಕೇಂದ್ರಗಳಲ್ಲಿ ಸ್ಮಾರ್ಟಕಾರ್ಡ ಆಧಾರಿತ ಬಸ್ ಪಾಸ್ ಪಡೆಯಲು ನಿರ್ದೇಶನ ಜಾರಿ ಮಾಡಲಾಗಿದೆ.
ಇ.ಡಿ.ಸಿ.ಎಸ್ ಇಲಾಖೆಯ ತಾಂತ್ರಿಕ ದೋಷದಿಂದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕರ್ನಾಟಕ-1/ಗ್ರಾಮ-1 ಕೇಂದ್ರಗಳಲ್ಲಿ ಬಸ್ ಪಾಸ್ ಮುದ್ರಣದಲ್ಲಿ ತೊಂದರೆಯುಂಟಾಗಿರುವುದರಿಂದ ಸದರಿ ಸಮಸ್ಯೆ ನಿವಾರಣೆಯಾಗುವವರೆಗೆ ಅಥವಾ ಗರಿಷ್ಠ ಜೂಲೈ 10ರ ವರೆಗೆ
ದಾಖಲೆಗಳನ್ನು ತೋರಿಸಿ ಸಂಸ್ಥೆಯ ನಗರ/ಉಪನಗರ/ಸಾಮಾನ್ಯ/ವೇಗದೂತ ಸಾರಿಗೆಗಳಲ್ಲಿ ಸೇವಾಸಿಂಧು ಮುಖೇನ ವಾಕರಸಾಸಂಸ್ಥೆಯ ವಿದ್ಯಾರ್ಥಿ ಬಸ್ ಪಾಸ್‌ಗಾಗಿ ಸಲ್ಲಿಸಿದ ಅರ್ಜಿಯ ಸಕಾಲ ಸ್ವೀಕೃತಿಯಲ್ಲಿ ನಮೂದಿಸಿದ ಮಾರ್ಗದಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.” ವಿದ್ಯಾರ್ಥಿಗಳು ಸೇವಾಸಿಂಧು ಮುಖೇನ ಸಂಸ್ಥೆಯ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಸಲ್ಲಿಸಲಾದ ಸಕಾಲ ಅರ್ಜಿ ಸ್ವೀಕೃತಿ.ವಿದ್ಯಾರ್ಥಿ ಮೂಲ ಗುರುತಿನ ಚೀಟಿ (ಉದಾ: ಆಧಾರ/ಶಾಲಾ ಪ್ರಾಂಶುಪಾಲರ ಸಹಿ ಒಳಗೊಂಡ ಪೋಟೊ ಹೊಂದಿದ ಗುರುತಿನ ಚೀಟಿ/ದೃಢೀಕೃತ ದಾಖಲೆ), ಈ ದಾಖಲೆಗಳನ್ನ ತೋರಿಸಿ ಪ್ರಯಾಣಿಸಬಹುದಾಗಿದೆ. ಈ ಕುರಿತು ಈಗಾಗಲೇ ಎಲ್ಲಾ ಚಾಲಕ ಹಾಗೂ ಸಿಬ್ಬಂದಿಗಳ ಗಮನಕ್ಕೆ ಕೂಡ ತರಲಾಗಿದೆ.
ಇದನ್ನೂ ಓದಿ