ಬೆಂಗಳೂರು : ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ಬಸ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ  ಪರಿಣಾಮ ಬಸ್ ನಲ್ಲಿ ಮಲ್ಲಗಿದ್ದ ನಿರ್ವಾಹಕ ಸಜೀವ ದಹನ ಆಗಿರುವ ಘಟನೆ ಬ್ಯಾಡರಹಳ್ಳಿ ವ್ಯಾಪ್ತಿಯ ಲಿಂಗಧೀರನಹಳ್ಳಿಯಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಬಸ್ ನಿರ್ವಾಹಕರಾಗಿದ್ದ ಮುತ್ತಯ್ಯ ಸ್ವಾಮಿ(45) ಮೃತ ದುರ್ದೈವಿ ಆಗಿದ್ದಾರೆ. ಬ್ಯಾಡರಹಳ್ಳಿ ವ್ಯಾಪ್ತಿಯ ಲಿಂಗಧೀರನಹಳ್ಳಿಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ವೇಳೆ ಬೆಳಗ್ಗಿನ ಜಾವ ಘಟನೆ ನಡೆದಿದೆ.ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಬಸ್ ನಲ್ಲಿ ಮಲ್ಲಗಿದ್ದರು ಎನ್ನಲಾಗಿದೆ. ಆದರೆ ಚಾಲಕ ಬೆಳಗ್ಗಿನ ಜಾವ ಬಸ್ ನಿಂದ ಎದ್ದು ಶೌಚಾಲಯಕ್ಕೆ ಹೋಗಿದ್ದ ಎನ್ನಲಾಗಿದ್ದು, ಈ ವೇಳೆಯಲ್ಲಿ ಘಟನೆ ನಡೆದಿದ್ದು, ಬಸ್ ನಲ್ಲಿ ಮಲ್ಲಗಿದ್ದ ನಿರ್ವಾಹಕ ಮುತ್ತಯ್ಯ ಸ್ವಾಮಿ ಸಜೀವ ದಹನವಾಗಿದ್ದಾರೆ‌.

ಘಟನೆಯಲ್ಲಿ ಬೆಂಕಿಗೆ ಆಹುತಿಯಾಗಿರುವ ಬಸ್ ಸುಮನಹಳ್ಳಿಯ ಡಿಪೋಗೆ ಸೇರಿದ್ದು ಎಂದು ಗೋತ್ತಾಗಿದೆ. ಇನ್ನೂ ನಿರ್ವಾಹನ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಂಕಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ.

ಅಗ್ನಿ ಶಾಮಕ ಸ್ಥಳಕ್ಕೆ ಆಗಮಿಸುವ ಮೊದಲೆ ನಿರ್ವಾಹಕ ಮೃತಪಟ್ಟಿದ್ದಾನೆ ಎನ್ನಲಾಗಿದೆ‌. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ.