ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನ 18ನೇ ಸೀಸನ್‌ಗೆ ಗೆಲುವಿನ ಆರಂಭ ಮಾಡಿದೆ. ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ 7 ವಿಕೆಟ್‌ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದೆ. ಕೆಕೆಆರ್ ಆರ್‌ಸಿಬಿಗೆ 175 ರನ್ ಗುರಿ ನೀಡಿತ್ತು. 22 ಎಸೆತ ಬಾಕಿಯಿರುವಾಗಲೇ ಆರ್‌ಸಿಬಿ ಈ ಗೆಲುವಿನ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಐಪಿಎಲ್ 2025ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನೊಂದಿಗೆ ಪ್ರಾರಂಭಿಸಿದೆ. ಮೊದಲ ಪಂದ್ಯದಲ್ಲೇ ಆರ್‌ಸಿಬಿ ತನ್ನ ಅದ್ಭುತ ಪ್ರದರ್ಶನದಿಂದ ಡಿಫೆಂಡಿಂಗ್ ಚಾಂಪಿಯನ್‌ಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅವರ ನೆಲದಲ್ಲೇ ಸೋಲಿಸಿತು. ಮಾರ್ಚ್ 22ರಂದು ಈಡನ್ ಗಾರ್ಡನ್‌ನಲ್ಲಿ ನಡೆದ ಪ್ರಾರಂಭಿಕ ಪಂದ್ಯದಲ್ಲಿ, ಕೆಕೆಆರ್ ಮೊದಲಾಗಿ ಬ್ಯಾಟಿಂಗ್ ಮಾಡಿ 20 ಓವರಿನಲ್ಲಿ 175 ರನ್ ಗುರಿ ನಿಗದಿಪಡಿಸಿತು. ಆರ್‌ಸಿಬಿ ಕೇವಲ 16.2 ಓವರಿನಲ್ಲಿ ಈ ಗುರಿಯನ್ನು ಹಿಂದಿಕ್ಕಿತು. ಇದರೊಂದಿಗೆ ಆರ್‌ಸಿಬಿ ಮೂರು ವರ್ಷಗಳ ನಂತರ ಕೋಲ್ಕತ್ತಾ ವಿರುದ್ಧ ಜಯ ಸಾಧಿಸಿದೆ. ಈ ಹಿಂದೆ, 2022 ಸೀಸನ್‌ನಲ್ಲಿ ಆರ್‌ಸಿಬಿ ಕೆಕೆಆರ್ ತಂಡವನ್ನು ಸೋಲಿಸಿತ್ತು. ಈ ಅದ್ಭುತ ಗೆಲುವಿನೊಂದಿಗೆ, ಆರ್‌ಸಿಬಿ ಪಾಯಿಂಟ್ ಟೇಬಲ್‌ನಲ್ಲಿ ತನ್ನ ಖಾತೆ ತೆರೆದಿದೆ.

ಕೆಕೆಆರ್ vs ಆರ್‌ಸಿಬಿ: 7 ವಿಕೆಟ್ ಗೆಲುವು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ಆವೃತ್ತಿಯನ್ನು ಭರ್ಜರಿಯಾಗಿ ಆರಂಭಿಸಿದೆ. ಬೆಂಗಳೂರು ತಂಡವು ಡಿಫೆಂಡಿಂಗ್ ಚಾಂಪಿಯನ್ ಕೋಲ್ಕತ್ತಾ ತಂಡವನ್ನು ಅವರ ನೆಲದಲ್ಲೇ 7 ವಿಕೆಟ್‌ಗಳಿಂದ ಸೋಲಿಸಿ 2 ಪಾಯಿಂಟ್‌ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ವಿರಾಟ್ ಕೊಹ್ಲಿ 59 ರನ್ ಗಳಿಸಿ ಅಜೇಯನಾಗಿದ್ದು, ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 5 ಎಸೆತಗಳಲ್ಲಿ 15 ರನ್ ಬಾರಿಸಿ ಅಜೇಯನಾಗಿ ಉಳಿದರು.

ಬೆಂಗಳೂರು ನಾಯಕ ರಜತ್ ಪಾಟೀದಾರ್ ಅವರ ಸ್ಫೋಟಕ ಇನ್ನಿಂಗ್ಸ್ ಅಂತ್ಯವಾಗಿದೆ. ದೊಡ್ಡ ಶಾಟ್ ಆಡುವ ಪ್ರಯತ್ನದಲ್ಲಿ ಅವರು ವೈಭವ್ ಅರೋರಾಗೆ ವಿಕೆಟ್ ಒಪ್ಪಿಸಿದರು. ಪಾಟೀದಾರ್ 16 ಎಸೆತಗಳಲ್ಲಿ 34 ರನ್ ಗಳಿಸಿದರು.

ಇದನ್ನೂ ಓದಿ