ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಅವರ‌ ಮೇಲೆ ಉತ್ತರಕನ್ನಡ‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ವಿಚಾರಣೆ ವೇಳೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಹಿಂದೂ ಪರ‌ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆದಿದ್ದರು.ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಎಸ್ಪಿ ಎಂ ನಾರಾಯಣ ಅವರು ಶ್ರೀನಿವಾಸ ನಾಯ್ಕ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿದ್ದು ಎಂದಿದ್ದಾರೆ..

ಭಟ್ಕಳದ ಹನುಮಾನ್ ನಗರದ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ್ ನಾಯ್ಕ ಸೇರಿ ಇನ್ನೂ ಕೆಲವರಿಗೆ ನಿನ್ನೆ (ಮಂಗಳವಾರ) ಶಿರಸಿಯಲ್ಲಿ ರೌಡಿ ಶೀಟರ್‌ಗಳ ಪರೇಡ್‌ ನಡೆಸಲಾಗಿದೆ. ಈ ವೇಳೆ ಎಲ್ಲರಿಗೂ ಕೂಡ ಹೇಗಿರಬೇಕು. ಎನ್ನುವ ಬಗ್ಗೆ ತಿಳುವಳಿಕೆ ಹೇಳಿದ್ದು ಬಿಟ್ಟರೆ ಯಾರ ಮೇಲು ಸಹ ಹಲ್ಲೆ‌ ಮಾಡಿಲ್ಲ..ಮೇಲಾಧಿಕಾರಿಗಳ ಸೂಚನೆಯಂತೆ ಆಗಾಗ ಪರೇಡ್ ಮಾಡಬೇಕಾಗುತ್ತದೆ‌. ಅದೆ ರೀತಿ ಮಾಡಿದ್ದೇವೆ.‌ಆದರೆ ಅವರು ಪರೇಡ್‌ ಮುಗಿಸಿ ಬಂದ ಮೇಲೆ ಈ ರೀತಿ ಆರೋಪ‌ ಮಾಡಿದ್ದಾರೆ. ಅದು ಸತ್ಯಕ್ಕೆ ದೂರವಾಗಿದೆ.

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾರು ಕಾನೂನು ಸುವ್ಯವಸ್ಥೆಗೆ ಪದೆ ಪದೆ ದಕ್ಕೆ ತರುತ್ತಾರೋ ಅವರೆಲ್ಲರ ಮೇಲೆ ಕರ್ನಾಟಕ ಪೊಲೀಸ್ ಆಯುಕ್ತರ ಪ್ರಕಾರ 4-5ಕ್ಕಿಂತ ಹೆಚ್ಚು ಕೇಸ್‌‌ಗಳಿರುವವರನ್ನ ಹಾಗೂ ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಹಾಗೂ ಸಾರ್ವಜನಿಕವಾಗಿ ಶಾಂತತಾ ಭಂಗ ಮಾಡುವವರ ಮೇಲೆ‌‌ ನೀಗಾ ಇಡಬೇಕಾಗಿರೋದು ಪೊಲೀಸ್‌ ಕರ್ತವ್ಯದಲ್ಲಿದೆ. ಹೀಗಾಗಿ ನಮ್ಮ ಪ್ರಧಾನ ಕಚೇರಿ ಆದೇಶದ ಮೇಲೆ ಆಯಾ ಪೊಲೀಸ್ ವ್ಯಾಪ್ತಿಗೆ ಬಳಪಡುವ ಹತ್ತು ಮಂದಿ ರೌಡಿಶಿಟರ್‌ಗಳನ್ನ ವಿಚಾರಣೆ ಮಾಡಬೇಕು ಎನ್ನುವ ಆದೇಶವಿದೆ. ಅದರಂತೆ ಮಾಡಿದ್ದೆವೆ.

ನಮ್ಮ ಜಿಲ್ಲೆಯಲ್ಲಿ 996 ರೌಡಿಗಳಿದ್ದು, ಅದರಲ್ಲಿ‌ ಯಾವುದೇ ಚಟುವಟಿಕೆಯಲ್ಲಿ ಇಲ್ಲದ 167ಮಂದಿ ರೌಡಿಶೀಟರ್‌ಗಳನ್ನ‌ ಕೈ ಬಿಡಲಾಗಿದೆ.ನಿನ್ನೆ ದಿನ ಭಟ್ಕಳದ ಶ್ರೀನಿವಾಸ ನಾಯ್ಕ ಸೇರಿ ಹತ್ತು‌ ಮಂದಿಯನ್ನ ಶಿರಸಿಗೆ ಕರೆದು ವಿಚಾರಣೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ‌ ಯಾವುದೇ ಕೆಲಸ‌ ಮಾಡಬಾರದು ಎಂದು ಹೇಳಿ ವಾರ್ನಿಂಗ್ ಮಾಡಿ ಕಳಿದ್ಧೇವೆ, ಆದರೆ ಹೊರ ಬಂದ ಮೇಲೆ ಎಸ್ಪಿ ಅವರು ಹಲ್ಲೆ ಮಾಡಿದ್ದಾರೆಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ವಿಚಾರವಾಗಿ ಯಾವುದೇ ಅನುಮತಿಯಿಲ್ಲದೆ‌ ಠಾಣೆಗೆ ಮುತ್ತಿಗೆ ಹಾಕಿ ಹಾಗೆ‌ ಹೆದ್ದಾರಿ ತಡೆ ನಡೆಸಲಾಗಿದೆ.ಯಾರೇಲ್ಲಾ ಕಾನೂನು ಚೌಕಟ್ಟನ್ನ ಬಿಟ್ಟು ನಡೆದುಕೊಂಡಿದ್ದಾರೆ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಆ ರೀತಿ ಕ್ರಮ ತೆಗೆದುಕೊಳ್ಳಾಗುವುದು ಎಂದು ಎಸ್ಪಿ ಎಂ ನಾರಾಯಣ ಅವರು ತಿಳಿಸಿದ್ದಾರೆ.

ಇದನ್ನೂ ಓದಿ