ಬೆಂಗಳೂರು : ಈಗಾಗಲೇ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಹಿಂದೂ ಹುಲಿ ಬಸವನಗೌಡ ಪಾಟೀಲ್‌ ಹೊಸ ಪಕ್ಷ ಕಟ್ಟಲು ಭರ್ಜರಿ ತಯಾರಿ ನಡೆಸಿದ್ದಾರೆ ಎನ್ನಲಾಗಿದ್ದು, ಪಕ್ಷಕ್ಕೆ ಕೇಸರಿ ಧ್ವಜ ಎನ್ನುವ ಹೆಸರು ನಾಮಕರಣ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಸದ್ಯದಲ್ಲೆ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಹೇಳಿಕೆ ನೀಡಿರುವ ಯತ್ನಾಳ ಹಿಂದೂಗಳ ರಕ್ಷಣೆಗೆ ಹೊಸ ಪಕ್ಷ ಕಟ್ಟುವ ಬಗ್ಗೆ ಜನರ ಬೇಡಿಕೆ ಕೂಡ ಇದೆ.ಹೀಗಾಗಿ ಮುಂದಿನ ದಿನದಲ್ಲಿ ಹೊಸ ಪಕ್ಷ ಘೋಷಣೆ ಮಾಡುವುದಾಗಿ ಹೇಳಿದ್ದರು. ಈ ನಡುವೆ ಇದೀಗ ಪಕ್ಷಕ್ಕೆ ಯಾವ ಹೆಸರು ನೀಡಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಯತ್ನಾಳ ಹಿಂದೂ ಹೋರಾಟಗಾರರಾಗಿದ್ದು, ಹೀಗಾಗಿ “ಕೇಸರಿ ಧ್ವಜ” ಎಂದು ಪಕ್ಷಕ್ಕೆ ನಾಮಕರಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ 30 ಶಾಸಕರು ಹಾಗೂ ಕೆಲ ಮಾಜಿ ಸಂಸದರು ಯತ್ನಾಳ ಅವರಿಗೆ ಹೊಸ ಪಕ್ಷ ಕಟ್ಟುವಂತೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.ಅಲ್ಲದೆ ಈ 30 ಶಾಸಕರು ಮುಂದಿನ ಚುನಾವಣೆ ವೇಳೆ ಯತ್ನಾಳ ಅವರು ಕಟ್ಟಲಿರುವ ಪಕ್ಷ ಸೇರಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಕೂಡ ಬಲವಾಗಿ ಕೇಳಿ ಬರುತ್ತಿದೆ. ಒಂದು ವೇಳೆ ಯತ್ನಾಳ ಹೊಸ ಪಕ್ಷ ಕಟ್ಟಿದೆ ಹೌದಾದಲ್ಲಿ ಬಿಜೆಪಿಯಲ್ಲಿ ಅಸಮಧಾನಗೊಂಡಿರುವ ಹೆಚ್ಚಿನ ಶಾಸಕರು, ನಾಯರು ಯತ್ನಾಳ ಪಕ್ಷದೊಳಗೆ ಸೇರಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ