ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಕ್ಷುಲಕ ಕಾರಣವೊಂದಕ್ಕೆ ತಮ್ಮನೋರ್ವ ಅಣ್ಣನ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುತ್ಗಾರ ಎಂಬದಲ್ಲಿ ನಡೆದಿದೆ.
ತ್ಯಾಗರಾಜ ಗಣಪತಿ ಮುಕ್ರಿ (30)ಹುತ್ಗಾರ ಎಂಬಾತನೇ ಈತನ ಸಹೋದರ ಶಿವರಾಜ ಗಣಪತಿ ಮುಕ್ರಿ ಎಂಬಾತನಿಂದ ಕೊಲೆಯಾದ ವ್ಯಕ್ತಿಯಾಗಿದ್ದಾನೆ.ತಪ್ಪಿಸಲು ಬಂದ ಹೇಮಾವತಿ ತ್ಯಾಗರಾಜ ಮುಕ್ರಿ ಹಾಗೂ ರೋಹಿತ್ ಮಂಜುನಾಥ ಮುಕ್ರಿ ಮೇಲೂ ಹಲ್ಲೆ ಮಾಡಲಾಗಿದೆ. ಇನ್ನೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತ್ಯಾಗರಾಜ ಮುಕ್ರಿ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಸಹ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾನೆ.
ಕೊಲೆ ಆರೋಪಿ ಮೃತ ತ್ಯಾಗರಾಜ್ ಮುಕ್ರಿ ಸಹೋದರ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ