ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ಪ್ರತಿಯೊಬ್ಬ ಹಿಂದೂಗಳು ಗೋವನ್ನ ಪೂಜಿಸುತ್ತಾರೆ. ಅದು ಸತ್ತಾಗಲು ಅಷ್ಟೇ ಗೌರವದಿಂದ ಹುಳಲಾಗತ್ತೆ. ಆದರೆ ಇಲ್ಲೊಬ್ಬರು ಸತ್ತ ಆಕಳನ್ನ ಟ್ರ್ಯಾಕ್ಟರ್‌ಗೆ ಕಟ್ಟಿಕೊಂಡು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದಾಂಡೇಲಿ ನಗರದ ಸಮೀಪದಲ್ಲಿರುವ ಕೋಗಿಲಬನದಲ್ಲಿ ಮೃತಪಟ್ಟ ಆಕಳಿನ ಮೃತದೇಹವನ್ನು ಟ್ರ್ಯಾಕ್ಟರ್ ಗೆ ಕಟ್ಟಿ ಅಮಾನವೀಯವಾಗಿ ಎಳೆದೊಯ್ಯಲಾಗಿದೆ.ಟ್ರ್ಯಾಕ್ಟರಿನ ಹಿಂಬದಿಗೆ ಮೃತ ಆಕಳಿನ ಮೃತ ದೇಹವನ್ನು ಹಗ್ಗದಲ್ಲಿ ಕಟ್ಟಿ ಎಳೆದೊಯ್ಯಲಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.ಇದನ್ನ ನೋಡಿದ ಪ್ರತಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ