ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ : ತಾಲೂಕಿನ ಹಾಲ್ಕಣಿ ಎಂಬಲ್ಲಿ ಕಳೆದ ಎಂಟು ವರ್ಷದ ಹಿಂದೆ ವ್ಯಕ್ತಿ ಓರ್ವನ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಉತ್ತರಾಖಂಡ ಮೂಲದ ಕೊಲೆ ಆರೋಪಿಯನ್ನ ಸಿದ್ದಾಪುರ ಪೊಲೀಸರು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

2016ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾಲ್ಕಣಿ ಎಂಬಲ್ಲಿ ಶರತ್ ಗಣೇಶ ಆಚಾರಿ ಎಂಬುವವರನ್ನ ಭರತ್ ಸಿಂಗ್ ಹಾಗೂ ದಿಲ್ ರಾಜ ಸೇರಿ ಕೊಲೆ ಮಾಡಿದ್ದರು.ಬಳಿಕ ದಿಲ್ ರಾಜ್ ಎಂಬಾತನನ್ನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಪ್ರಮುಖ ಆರೋಪಿಯಾಗಿದ್ದ ಭರತ್ ಸಿಂಗ್ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ,

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಎಂ ನಾರಾಯಣ ಮಾರ್ಗದರ್ಶನದಲ್ಲಿ Dysp ಗಣೇಶ ಕೆ ಎಲ್ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಪಿಆಯ್ ಜೆ ಬಿ ಸೀತಾರಾಮ, ಪಿಎಸ್ಆಯ್ ಅನಿಲ್ ಸಿಬ್ಬಂದಿಗಳಾದ ರಾಜು ಎಂ,ವಿನ್ಸನ್ ಫರ್ನಾಂಡೀಸ್ ಒಳಗೊಂಡ ತಂಡ ಆರೋಪಿಯನ್ನ ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಗಮನಿಸಿ