ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಜಿಲ್ಲಾದ್ಯಂತ ಉಸುಕು ನಿಷೇಧ ಇರುವಾಗಲೆ ಹೊನ್ನಾವರ ಭಾಗದಲ್ಲಿ ರಾಜಾರೋಷವಾಗಿ ಉಸುಕು ಸಾಗಾಟ ನಡೆಯುತ್ತಿದ್ದು.‌ ಮಾವಿನ‌‌ಕುರ್ವಾ ಅಂಗಡಿ ಹಿತ್ತಲು ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟ ಉಸುಕು ಅಡ್ಡೆಯ(Illegal Sand Mining) ಮೇಲೆ ಪೊಲೀಸರು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಅಂಗಡಿ ಹಿತ್ತಲು ಬಳಿ ರೇಸಾರ್ಟ್ ನಿರ್ಮಾಣಕ್ಕಾಗಿ ವ್ಯಕ್ತಿ ಒಬ್ಬರು ಅಕ್ರಮವಾಗಿ ಉಸುಕು ಸಂಗ್ರಹಿಸಿಟ್ಟುಕೊಂಡಿದ್ದು. ಈ ಬಗ್ಗೆ ಮಾಹಿತಿ ತಿಳಿದ ಹೊನ್ನಾವರ ಪೊಲೀಸರು ದಾಳಿ ನಡೆಸಿದ್ದು,ಹತ್ತಕ್ಕೂ ಅಧಿಕ ಲಾರಿಯಷ್ಟು ಮರಳನ್ನ ಸಂಗ್ರಹಿಸಿಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಮೊದಲು ಹೊನ್ನಾವರ ಭಾಗದಲ್ಲಿಯೂ ಸಹ ಸಂಪೂರ್ಣವಾಗಿ ಬಂದ್ ಆಗಿತ್ತು ಎನ್ನಲಾಗಿದ್ದು, ಆದರೆ ಇತ್ತಿಚೇಗೆ ಬಂದ ಪೊಲೀಸ್ ಅಧಿಕಾರಿಗಳ ಕುಮ್ಮಕ್ಕಿನಿಂದಾಗಿ ಅಕ್ರಮ‌ ಮರಳು ದಂಧೆ ನಡೆಸಲಾಗುತ್ತದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳ ಬರುತ್ತಿದೆ.

ಅಂಗಡಿ ಹಿತ್ತಲಿನಲ್ಲಿ ವಶಕ್ಕೆ ಪಡೆದ ಮರಳಿನ (ಮರಳನ್ನು (Sand) ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಲ್ಲಿ ಮಾಹಿತಿ ಕೇಳಲಾಗಿದ್ದು,ಅಂಗಡಿ ಹಿತ್ತಲಿನಲ್ಲಿ ಮರಳು ಅಡ್ಡೆಯ ಮೇಲೆ‌ ನಡೆದಿರುವ ದಾಳಿಯ ಬಗ್ಗೆ ತಮ್ಮಗೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.ಆದರೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದ ಬಗ್ಗೆ ಯಾಕೆ ಇದುವರಗೆ ಸಂಬಧಿಸಿದ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಗಮನಿಸಿ