ಸುದ್ದಿಬಿಂದು ಬ್ಯೂರೋ ವರದಿ
Sirsi: ಶಿರಸಿ: ಹಿಂದೂ ಯುವಕನೋರ್ವ ಮುಸ್ಲಿಂ ಯುವತಿಗೆ ಉದ್ಯೋಗ ಕೊಡಿಸಲು ಬಂದಿದ್ದ ವೇಳೆ ಮುಸ್ಲಿಂ ಯುವಕರು ಸೇರಿಕೊಂಡು ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಶಿರಸಿ ತಾಲೂಕಿನ ಕೊರ್ಲಕಟ್ಟಾ ನಿವಾಸಿ ವೀರೆಂದ್ರ ಜೀನದತ್ತ ಜೈನ್ ಹಲ್ಲೆಗೊಳಗಾದ ಹಿಂದೂ ಯುವಕನಾಗಿದ್ದಾನೆ. ಹಲ್ಲೆಗೊಳಗಾದ ವಿರೇಂದ್ರ ಮತ್ತು ಯುವತಿ ಶಿವಾಜಿಚೌಕ ಬಳಿ ಐಸಕ್ರೀಮ್ ತಿನ್ನುತ್ತಿದ್ದ ಸಂದರ್ಭದಲ್ಲಿ ಹಲ್ಲೆ ಮಾಡಲಾಗಿದೆ. ಹಲ್ಲೆಗೆ ಒಳಗಾದ ಯುವಕ ಹಾಗೂ ಆತನ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವತಿ ಇಬ್ಬರೂ ಒಂದೇ ಊರಿನವರು ಎನ್ನಲಾಗಿದ್ದು,ಊರಲ್ಲಿ ಈ ಎರಡು ಕುಟುಂಬದವರು ಅನೋನ್ಯವಾಗಿಯೇ ಇದ್ದಾರೆ.ಎನ್ನಲಾಗಿದೆ. ಈತ ಉದ್ಯೋಗ ಕೊಡಿಸಲು ಮುಸ್ಲಿಂ ಯುವತಿಯನ್ನ ಕರೆದುಕೊಂಡು ಬಂದ ವೇಳೆಯಲ್ಲಿ ಈತನ ಮೇಲೆ ಮುಸ್ಲಿಂ ಯುವಕರು ಬೈಕ್ ತಡೆದು ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಯುವತಿಗೆ ಕೆಲಸ ಕೊಡಿಸುವುದಕ್ಕಾಗಿ ಹಿಂದೂ ಯುವಕ ಮುಸ್ಲಿಂ ಯುವತಿಯನ್ನ ಶಿರಸಿ ರೋಟರಿ ಆಸ್ಪತ್ರಗೆ ಕರೆದುಕೊಂಡು ಬಂದಿದ್ದು ಈ ವೇಳೆ ಮೂವರು ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ.ರಾಜೀವನಗರದ ಶಕೀಲ ಅಹಮ್ಮದ್ ಅನ್ವರ ಸಾಬ ಶೇಖ,ಮಹಮ್ಮದ ಮಾಜ ಅಬ್ದುಲ್ ಗಫಾರ ಕಾಡಗಿ ಹಾಗು ಗೋಲಗೇರಿ ಓಣಿಯ ಉಬೇದ ಇಕ್ಬಾಲ್ ಸವಣೂರ್ ಹಲ್ಲೆ ಮಾಡಿರುವ ಮುಸ್ಲಿಂ ಯುವಕರಾಗಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಮನಿಸಿ