ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡಕುಸಿತ ಉಂಟಾಗಿ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದ ಕೇರಳದ ಚಾಲಕ ಅರ್ಜುನ್ ಅವರ ಸಹೋದರಿ ಅಂಜು, ಲಾರಿ ಮಾಲೀಕ ಮನಾಫ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿರುವುದಾಗಿ ಅರ್ಜುನ್ ಕುಟುಂಬಸ್ಥರು ತಿಳಿಸಿದ್ದಾರೆ.
ಈ ವಿಚಾರವಾಗಿ ಅರ್ಜುನ್ ಕುಟುಂಬಸ್ಥರು ತಮ್ಮ ಮನೆಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಮನಾಫ್ ಅವರು ತಮ್ಮ ಕುಟುಂಬದ ಭಾವನಾತ್ಮಕ ಪರಿಸ್ಥಿತಿಯನ್ನು ಬಂಡವಾಳವನ್ನಾಗಿಸಿಕೊಂಡು,ಮೃತ ಸಹೋದರನ ಫೋಟೊ ಬಳಸಿ ಪ್ರಚಾರ ಪಡೆಯುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಕುಟುಂಬದ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ಅಂಜು ದೂರಿನಲ್ಲಿ ನಮೂದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕುಟುಂಬದ ಬಗ್ಗೆ ಮಾನಹಾನಿ ಪ್ರಚಾರ ಮಡುತ್ತಿರುವವರ ವಿರುದ್ದವೂ ದೂರು ನೀಡಿದ್ದಾರೆ.
ಕುಟುಂಬದ ಪರಿಸ್ಥಿತಿಯನ್ನು ಮನಾಫ್ ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಿದ್ದಾರೆ,ಹಣವನ್ನೂ ಸಂಗ್ರಹಿಸುತ್ತಿದ್ದಾರೆ ಎಂದು ಅರ್ಜುನ್ ಕುಟುಂಬಸ್ಥರು ಮುನಾಪ್ ವಿರುದ್ದ ಆರೋಪಿಸಿದ್ದಾರೆ.
ಮನಾಫ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ಗಲಭೆಗೆ ಕುಮ್ಮಕ್ಕು) ಹಾಗೂ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (O) (ಸಾರ್ವಜನಿಕ ಶಾಂತಿ ಭಂಗ ಮತ್ತು ಅಶಾಂತಿ ಉಂಟುಮಾಡುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾರ್ಯಚರಣೆಯ ದಿಕ್ಕು ತಪ್ಪಿಸಿದ್ದ ಮುನಾಫ್.
ಉತ್ತರಕನ್ನಡ ಜಿಲ್ಲಾಡಳಿ ಆರಂಭದಿಂದಲ್ಲೂ ಒಳ್ಳೆಯ ರೀತಿಯಲ್ಲಿ ಕಾರ್ಯಚರಣೆ ಮಾಡಿದೆ.ಸ್ಥಳೀಯ ಶಾಸಕರು ಕೂಡ ಎಲ್ಲಾ ರೀತಿಯಲ್ಲಿ ಸಹಕಾರ ಮಾಡಿದ್ದಾರೆ. ಶಾಸಕರು ಲಾರಿ ನದಿಯಲ್ಲಿಯೇ ಇದೆ ಅಂತಾ ಹೇಳಿದರು ಅದನ್ನ ಮುನಾಫ್ ಕೇಳದೆ ಸಂಪೂರ್ಣ ಕಾರ್ಯಚರಣೆಯ ದಿಕ್ಕು ತಪ್ಪಿಸಿದ್ದಾರೆ. ಶಾಸಕರು ಹೇಳಿದ ಸ್ಥಳದಲ್ಲೆ ಕಾರ್ಯಚರಣೆ ಮಾಡಿದ್ದರೆ ನಮ್ಮ ಅರ್ಜನ್ ಸಿಗತ್ತಾ ಇದ್ದ ಎಂದು ಅಭಿಪ್ರಾಯ ಪಟ್ಟಿದ್ದಾರೆ
ಗಮನಿಸಿ
- ಕೇಣಿ ಬಂದರು ಯೋಜನೆ :ಮೀನುಗಾರರ ಮನೆ/ ಕಡಲತೀರ ಸ್ವಾಧೀನವಿಲ್ಲ, ಸಾಧಕ-ಬಾಧಕ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ JSW
- school holidayಭಾರಿ ಮಳೆ ನಾಳೆ ಶಾಲೆ-ಅಂಗನವಾಡಿಗೆ ರಜೆ ಘೋಷಣೆ
- School holiday ಭಾರಿ ಮಳೆ ನಾಳೆ ಶಾಲೆ-ಅಂಗನವಾಡಿಗೆ ರಜೆ ಘೋಷಣೆ