ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ :ನಗರದ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ ಮಾಡಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ..

ಸೆ‌ 19ರಂದು ನಗರದ ಲಿಂಕ್ ರಸ್ತೆಯಲ್ಲಿರುವ ಅಭಿಷೇಕ್ ಕಾಳೆ ಮಾಲಕತ್ವದ ಮೆಡಿಕಲ್ ಅಂಗಡಿಯೊಳಗಿದ್ದ ನಗದು 4 ಲಕ್ಷ ರೂಪಾಯಿ ಮತ್ತು ಚಿನ್ನದ ಆಭರಣಗಳು, ಇದೇ ಕಟ್ಟಡದಲ್ಲಿರುವ ಪಕ್ಕದ ಶರಣ್.ಸಿ.ಅರಳಿಯವರ ಕಿರಾಣಿ ಅಂಗಡಿಯಿಂದ 5 ರಿಂದ 50 ಸಾವಿರ ರೂಪಾಯಿ ನಗದು, ಅಲ್ಲೇ ಹತ್ತಿರದಲ್ಲಿರುವ ವಿಷ್ಣು ಕಲಾಲ್ ಅವರು ನಡೆಸುತ್ತಿರುವ ಮೈಲಾರ ವೈನ್ ಸೆಂಟರಿನಿಂದ ಸರಿ ಸುಮಾರು 35 ಸಾವಿರ ನಗದು ಹಾಗೂ ವಿವಿಧ ಮದ್ಯದ ಬಾಟಲಿಗಳನ್ನು ಮತ್ತು ಮೈಲಾರ ವೈನ್ ಸೆಂಟರಿನ ಮುಂಭಾಗದಲ್ಲಿರುವ ಕಿರಣ್ ಕರಡಿ ಅವರ ಎಲ್ ಜಿ ಕಿರಾಣಿ ಅಂಗಡಿಗೆ ನುಗ್ಗಿ ರೂ2,000ನಗದು ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ದಾಂಡೇಲಿಯ ಡಿವೈಎಸ್ಪಿಯವರ ಮಾರ್ಗದರ್ಶನದಡಿ ದಾಂಡೇಲಿಯ ಸಿಪಿಐ ಅವರ ನೇತೃತ್ವದಲ್ಲಿ ನಗರ ಠಾಣೆಯ ಪಿಎಸ್ಐ ಗಳು ಮತ್ತು ಪೊಲೀಸರ ತಂಡವೊಂದನ್ನು ರಚಿಸಿ ಪ್ರಕರಣವನ್ನು ಅತ್ಯಲ್ಪ ಅವಧಿಯಲ್ಲೆ ಭೇದಿಸಲಾಗಿದೆ.

ಬಂಧಿತ ಆರೋಪಿಗಳಿಬ್ಬರು ಅಂತರ್ ರಾಜ್ಯ ಕಳ್ಳರೆಂದು ತಿಳಿದು ಬಂದಿದ್ದು, ಬಂಧಿತರು 19 ವಿವಿಧ ಕಳ್ಳತನ ಪ್ರಕರಣಗಳು ಇವರ ಮೇಲೆ ಬೇರೆ ಬೇರೆ ಕಡೆ ದಾಖಲಾಗಿರುತ್ತದೆ ಎಂದು ತಿಳಿದು ಬಂದಿದೆ. ಬಂಧಿತರಲ್ಲಿ ಓರ್ವ ಹುಬ್ಬಳ್ಳಿ ಮೂಲದ ಹಸನ್ ಸಾಬ್ ಬೇಗ್ ಮತ್ತು ಹಳಿಯಾಳದ ಆಸೀಪ್ ಬೇಗ್ ಎಂದು ತಿಳಿದು ಬಂದಿದೆ.

ಗಮನಿಸಿ