suddibindu.in
ಹುಬ್ಬಳ್ಳಿ ; ಚಲಿಸುತ್ತಿದ್ದ ಓಮ್ನಿ ಒಂದರ ಟಾಯರ್ ಬ್ಲಾಸ್ಟ್ ಆಗಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಐವರು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ಸಮೀಪದ ಕಿರೇಸೂರ ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟರುವ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಓಮ್ನಿ ಚಲಿಸುತ್ತಿರುವಾಗಲೇ ಟಾಯರ್ ಬ್ಲಾಸ್ಟ್ ಆಗಿದ್ದು,ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಲಾರಿಗೆ ಓಮ್ನಿ ಡಿಕ್ಕಿ ಹೊಡೆದಿದೆ.ಇದರಿಂದಾಗಿ ಓಮ್ನಿಯಲ್ಲಿದ್ದ ಓರ್ವ ವ್ಯಕ್ತಿ ಮೃತಪ್ಪಿದ್ದು,ಇನ್ನೂಳಿದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಹೆಬಸೂರ ಕಡೆ ಹೋಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.
ಇದನ್ನೂ ಓದಿ
- ರಂಜಿತಾ ಸಹೋದರನೊಂದಿಗೂ ಫಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ರಫೀಕ್
- ಮಹಿಳೆ ಹತ್ಯೆ ಪ್ರಕರಣ: ಮೃತದೇಹ ಆಗಮನ, ಕುಟುಂಬಕ್ಕೆ ಪರಿಹಾರ ಘೋಷಿಸಿದ ಹೆಬ್ಬಾರ್
- ಯಲ್ಲಾಪುರ ಮಹಿಳೆ ಹತ್ಯೆ ಪ್ರಕರಣ: ರಂಜಿತಾ ಮನೆಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ
ಗಾಯಗೊಂಡವರನ್ನ ತಕ್ಷಣ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.





