suddibindu.in
ಕಾರವಾರ :ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಅನಾಥವಾದ 2 ನಾಯಿಯನ್ನು ಸಾಕುವ ಉದ್ದೇಶಕ್ಕಾಗಿ ಕಾರವಾರ ಪೊಲೀಸ್ ವರಿಷ್ಟಾಧಿಕಾರಿಯವರು ತಮ್ಮ ಮನೆಗೆ ಕರೆದೊಯ್ದಿದ್ದಾರೆ.
ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಹಲವರು ಪ್ರಾಣ ಕಳೆದುಕೊಂಡರೆ ನೀರುಪಾಲಾದ ಹೋಟೆಲ್ ಮಾಲಕ ಲಕ್ಷ್ಮಣ ನಾಯ್ಕರ 2 ನಾಯಿ ಅಕ್ಷರಶಃ ಅನಾಥವಾಗಿತ್ತು. ಶ್ವಾನ ಪ್ರೀತಿಗೆ ಯಾರೂ ಸಾಟಿಯಲ್ಲ ಎಂಬಂತೆ ಈ ಎರಡೂ ನಾಯಿ ದುರಂತ ಸ್ಥಳದಲ್ಲೇ ತನ್ನ ಮಾಲಕನಿಗಾಗಿ ಪರಿತಪಿಸುತ್ತಲೇ ಇತ್ತು. ಸ್ಥಳಕ್ಕೆ ಬಂದವರು ನಾಯಿಯ ಪ್ರೀತಿ ಕಂಡು ಬಿಸ್ಕೀಟ್ ಮತ್ತೀತರ ತಿಂಡಿ, ತಿನಿಸು ನೀಡಿ ಹೋಗುತ್ತಿದ್ದರಾದರೂ ನಾಯಿಗಳಿಗೆ ಅನಾಥ ಪ್ರಜ್ಞೆ ಕಾಡುತ್ತಲೇ ಇತ್ತು.
ಇದನ್ನೂ ಓದಿ
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಕೊನೆಗೂ ನಾಯಿ ಪ್ರೀತಿಗೆ ಸೋತ ಕಾರವಾರ ಪೊಲೀಸ್ ವರಿಷ್ಟಾಧಿಕಾರಿ ನಾಯಿಯನ್ನು ತಾವೇ ಸಾಕುವ ಉದ್ದೇಶಕ್ಕಾಗಿ ತಮ್ಮ ಮನೆಗೆ ಕರೆದೊಯಿದ್ದಾರೆ. ಪೊಲೀಸ್ ವರಿಷ್ಟಾಧಿಕಾರಿಯ ಮಾನವೀಯತೆಯನ್ನು ಶಿರೂರು ಸುತ್ತಮುತ್ತಲಿನ ಜನತೆ ಕೊಂಡಾಡಿದ್ದಾರೆ.