suddibindu.in
ಯಲ್ಲಾಪುರ: ಅಗಸ್ಟ 07 ರಿಂದ 11 ರ ವರೆಗೆ ತಮಿಳುನಾಡಿನ ಕೊಯಮತ್ತೂರ ನಲ್ಲಿ ನಡೆದ ಇಂಡಿಯಾ ಸ್ಕೆಟ್ ಗೇಮ್ಸ್ 2024,ಚಾಂಪಿಯನ್ಷಿಪ್ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂವರು ಹುಡಗಿಯರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದು ಕೊಂಡಿದ್ದಾರೆ.
ಯಲ್ಲಾಪುರ ವಾಯ್ ಟಿ ಎಸ್ ಎಸ್ ಪದವಿ ಪೂರ್ವ ಕಾಲೇಜಿನ ಸೇಜಲ್ ಸತೀಶ ನಾಯ್ಕ, ಶಿರಸಿಯ ಎಮ್ ಈ ಎಸ್ ಕಾಲೇಜಿನ ಅನಘಾ ರಮೇಶ ಹೆಗಡೆ, ದಾಂಡೇಲಿಯ ಸಾನಿಕಾ ಉಮೇಶ ತೊರತ್ ಕರ್ನಾಟಕ ರಾಜ್ಯ ಸಿನಿಯರ್ ಮಹಿಳಾ ಸ್ಕೆಟಿಂಗ್ ಡರ್ಬಿ ತಂಡವನ್ನು ಪ್ರತಿನಿಧಿಸಿದ್ದರು.
ಇದನ್ನೂ ಓದಿ
- Road Accident/ಸ್ಕೂಟಿ ಸವಾರನ ತಲೆಯ ಮೇಲೆ ಚಲಿಸಿದ ಬಸ್ ; ಸ್ಥಳದಲ್ಲೇ ಸಾವು
- ರಸ್ತೆ ಬದಿಯಲ್ಲಿ ಚಿರತೆ ಮರಿ ಪ್ರತ್ಯಕ್ಷ : ಶಿರಸಿ ತಾಲೂಕಿನ ಖಾನನಗರದಲ್ಲಿ ಅಪರೂಪದ ದೃಶ್ಯ.!
- ಕುಮಟಾ ಎಸಿ ಅವರ ಕಾರಿಗೆ ಡಿಕ್ಕಿ ಹೊಡೆದ ಶ್ರೀಕುಮಾರ ಬಸ್
ಕರ್ನಾಟಕ, ತಮಿಳನಾಡು,ಯುಪಿ, ಓರಿಸ್ಸಾ ,ತಮಿಳನಾಡು ಬಿ, ಮಹಾರಾಷ್ಟ ಇನ್ನಿತರ ರಾಜ್ಯಗಳು ಪಂದ್ಯಾವಳಿಯಲ್ಲಿ ಬಾಗವಹಿಸಿದ್ದರು. ಈ ಮೂವರು ಕೈಗಾ ರೊಲರ್ ಸ್ಕೇಟಿಂಗ್ ಕ್ಲಬ್ ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ತರಬೇತಿಯನ್ನು ಪಡೆಯುತ್ತಿದ್ದು ಸತತ ನಾಲ್ಕನೆ ಬಾರಿ ಕರ್ನಾಟಕ ತಂಡಕ್ಕಾಗಿ ಆಡುತ್ತಿದ್ದಾರೆ ಎಂದು ತರಬೇತುದಾರ ದೀಲಿಪ್ ಹಣಬರ್ ಹಾಗು ಸಹಾಯಕ ತರಬೇತುದಾರರಾದ ಮಂಜಪ್ಪಾ ನಾಯ್ಕ ತಿಳಿಸಿದ್ದಾರೆ