ಕಳೆ ಮೂರು ದಿನದಿಂದ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಶನಿವಾರ ಸ್ಥಿರವಾಗಿದೆ. ಚಿನ್ನ ಮತ್ತು ಬೆಳ್ಳಿ ಖರೀದಿಸಲು ಇದು ಉತ್ತಮ ಸಮವಾಗಿದೆ. ಮೂರು ದಿನಗಳಿಂದ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಪ್ರತಿ 10 ಗ್ರಾಂ ಚಿನ್ನದ ದರ ಸುಮಾರು ₹1300 ಇಳಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ₹4500 ರೂ. ಇಳಿಕೆ ಕಂಡಿದೆ.

ರಾಜ್ಯದಲ್ಲಿಂದು ಚಿನ್ನದ ಬೆಲೆ
ಬೆಂಗಳೂರಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಇಳಿಕೆ ಕಂಡಿದೆ. ಇಂದು 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹440 ಇಳಿಕೆಯಾಗಿದ್ದು, 69,270 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಹಾಗೂ 22ಕ್ಯಾರೆಟ್ ಆಭರಣಗಳ ಚಿನ್ನದ ದರ ₹400 ಇಳಿಕೆಯಾಗಿದ್ದು, 63,500ಕ್ಕೆ ಕುಸಿದಿದೆ. ದೆಹಲಿಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 63 ಸಾವಿರದ 650 ರೂ.ಗೆ ಇಳಿದಿದೆ. ಹಾಗೂ 24 ಕ್ಯಾರೆಟ್ ಪಸಿಡಿ ದರ ರೂ. 440 ಇಳಿಕೆಯಾಗಿ ರೂ. 69 ಸಾವಿರದ 420ಕ್ಕೆ ಇಳಿದಿದೆ.

ಇದನ್ನೂ ಓದಿ

ಬೆಳ್ಳಿಗೆ ಬೆಲೆ 4000 ರೂ. ಇಳಿಕೆ
ಬೆಂಗಳೂರಲ್ಲಿ ಬೆಳ್ಳಿ ದರ ಕೂಡ ಕುಸಿಯುತ್ತಿದೆ. ನಿನ್ನೆ ಶುಕ್ರವಾದ ಪ್ರತಿ ಕೆಜಿ ಬೆಳ್ಳಿ ಬೆಲೆ 3500 ರೂ. ಇಳಿಕೆಯಾಗಿತ್ತು. ಇಂದು ಶನಿವಾರ ಸಹ ಪ್ರತಿ ಕೆಜಿಗೆ ₹500 ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಳ್ಳಿ ದರ ರೂ. 87 ಸಾವಿರಕ್ಕೆ ಇಳಿದಿದೆ. ದೆಹಲಿಯಲ್ಲಿ ಶುಕ್ರವಾರ ಪ್ರತಿ ಕೆಜಿ ಬೆಳ್ಳಿಯ ಬೆಲೆ 500 ರೂ. ಇಳಿಕೆಯಾಗಿದ್ದು, ₹82 ಸಾವಿರಕ್ಕೆ ಕುಸಿದಿದೆ. ಆದಾಗ್ಯೂ, ಚಿನ್ನದ ಮೇಲಿನ ತೆರಿಗೆಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ. ಆಭರಣ ಖರೀದಿಗೂ ಮುನ್ನ ಸ್ಥಳೀಯ ಆಭರಣ ಮಳಿಗೆಗಳಲ್ಲಿ ನಿಖರ ಬೆಲೆ ತಿಳಿದು ಖರೀದಿಗೆ ಮುಂದಾಗಿದೆ.