suddibindu.in
ಬೆಂಗಳೂರು:ಕಳೆದ ಎರಡು ತಿಂಗಳಿನಿಂದ ಬಾಕಿ ಇರಿಸಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಯ 4 ಸಾವಿರ ರೂಪಾಯಿ ನಾಳೆ ಜಮಾ ಆಗಲಿದೆ. ಉತ್ತರಕನ್ನಡ, ಉಡುಪಿ,ಮಂಗಳೂರು, ಧಾರವಾಡ, ಹಾಸನ ಸೇರಿದಂತೆ ಬಾಕಿ ಉಳಿಸಿಕೊಂಡಿದ್ದ ಜಿಲ್ಲೆಗಳ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ನಾಳೆ ಎರಡು ತಿಂಗಳ ಅವಧಿಯ 4 ಸಾವಿರ ರೂಪಾಯಿ ಜಮಾ ಆಗಲಿದೆ. ಲೋಕಸಭಾ ಚುನಾವಣೆಗೂ ಮೊದಲು ಸರ್ಕಾರ ಗೃಹಲಕ್ಷ್ಮಿ ಹಣ ಜಮಾ ಆಗಿತ್ತು. ಲೋಕಸಭಾ ಚುನಾವಣೆ ನಂತರದಲ್ಲಿ ಹಣ ಜಮಾ ಆಗದೆ ಇರುವ ಬಗ್ಗೆ ಯೋಜನೆ ನಿಂತೆ ಹೋಗಲಿದೆ ಎನ್ನುವ ಬಗ್ಗೆ ಚರ್ಚೆಗಳು ಆರಂಭವಾಗಿತ್ತು. ಆದರೆ ಸರಕಾರ ಇದೀಗ ಎರಡು ತಿಂಗಳಿಂದ ಬಾಕಿ ಉಳಿಸಿಕೊಂಡ ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನ ಒಂದೆ ಸಲ ಜಮಾ ಮಾಡಲಿದೆ.