Suddibindu.in
ಜೊಯಿಡಾ: ಪತ್ರಕರ್ತರು ತೆರಳುತ್ತಿದ್ದ ಕಾರಿನಡಿ ನಾಡ ಬಾಂಬ್ ಸ್ಫೋಟವಾದ(bomb) ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಅಂದಹಾಗೆ, ಜೋಯಿಡಾದಲ್ಲಿ ನಡೆಯತ್ತಿದ್ದ ಜನ ಸಂಪರ್ಕ ಸಭೆಗೆ ಗುಂದದಿಂದ ಆಗಮಿಸುತ್ತಿದ್ದ ಪತ್ರಕರ್ತರ ಕಾರಿನಡಿ ನಾಡಬಾಂಬ್ ಬ್ಲಾಸ್ಟ್ ಆಗಿದೆ. ಪರಿಣಾಮ ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಮೂವರು ಪತ್ರಕರ್ತರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ
- ಕಾಳಿ ನದಿಗೆ ಸೇತುವೆ ಮಂಜೂರಿಗೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ರೂಪಾಲಿ ನಾಯ್ಕ
- ಮೀನು ಹಿಡಿಯಲು ಹೋದ ಯುವಕನಿಗೆ ಮೀನು ಚುಚ್ಚಿ ಸಾವು
- ಮಿರ್ಜಾನದಲ್ಲಿ ಮಂಕಿ ನಿವಾಸಿ ಆತ್ಮಹತ್ಯೆ
ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಳಸುವ ನಾಡ ಬಾಂಬ್ ರಸ್ತೆಯಲ್ಲಿ ಬಿದ್ದಿದ್ದು, ಅದರ ಮೇಲೆ ಕಾರಿನ ಟಯರ್ ಹತ್ತಿ ಸ್ಫೋಟ ಸಂಭವಿಸಿದೆ. ಜೊಯಿಡಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.