suddibindu.in
ಕುಮಟಾ: ಕುಮಟಾ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಭಾರೀ ಹೊಂಡ ಉಂಟಾಗಿದ್ದು ವಾಹನ ಸವಾರರು ಸಂಚರಿಸಲು ಪರದಾಟ ನಡೆಸುವಂತಾಗಿದ್ದು, ಹೆದ್ದಾರಿ ದುರಸ್ತಿ ಪಡಿಸುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಬಣ ಹಾಗೂ ಸ್ಥಳೀಯರು ಸೇರಿ ಅಳಕೋಡದಲ್ಲಿ ಹೆದ್ದಾರಿ ತಡೆ ನಡೆಸಿ ಹೊಂಡದಲ್ಲಿ ಗಾಳ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ರು.
ಕುಮಟಾ-ಶಿರಸಿ ಹೆದ್ದಾರಿ ಅಗಲೀಕರಣ ಕಾಮಗರಿ ನೆಪದಲ್ಲಿ ಎಲ್ಲಾ ಕಡೆಯಲ್ಲಿಯೂ ಅಗೆದು ಹಾಕಲಾಗಿದ್ದು, ಇನ್ನೂ ದುರಸ್ತಿಯಾಗಿಲ್ಲ.ಮಳೆಗಾಲದಲ್ಲಿ ಹೊಂಡದಲ್ಲಿ ನೀರು ತುಂಬಿಕೊಂಡಿರುವುದರಿಂದ ವಾಹನ ಸವಾರರು ಸಂಕಷಕ್ಕೆ ಒಳಗಾಗಿದ್ದರು. ಇದನ್ನ ಖಂಡಿಸಿ ಕರವೇ ಸ್ವಾಭಿಮಾನಿ ಬಣದಿಂದ ಹೆದ್ದಾರಿಯಲ್ಲಿ ಬಿದ್ದಿರುವ ಹೊಂಡದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಮುಲಕ ಸರಕಾರವನ್ನ ಅಣಕಿಸಿದ್ದರು.
ಇದನ್ನೂ ಓದಿ
- TV9 ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಚಾಲನೆ ಕೊಟ್ಟ ನಟಿ ಸಂಜನಾ ಹಾಗೂ ನಟ ವಿರಾಟ್
- ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವೀಣಾ ಗುನಗಿಯವರಿಗೆ ಗುನಗಿ ಸಮಾಜ ಸಹಾಯವಾಣಿ ಸಂಘದಿಂದ ಸನ್ಮಾನ
- ಸ್ಕೂಟಿ ಹಿಂಬದಿಗೆ ಡಿಕ್ಕಿ ಹೊಡೆದ ಕಾರು : ಸ್ಕೂಟಿ ಸವಾರ ಗಂಭೀರ
ಇನ್ನೂ ಗುಂಡಿ ಇರುವ ಕಡೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ಹೊರಹಾಕಿದರು. ರಸ್ತೆಗಳಲ್ಲಿ ಗುಂಡಿಗಳಿದ್ದು, ವಾಹನ ಸವಾರರಿಗೆ ಸಾಕಷ್ಟು ಕಿರಿಯನ್ನುಂಟು ಮಾಡುತ್ತಿದೆ.ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಹೋರಾಟ ಮುಂದುವರೆಸಿದರು.ಸ್ಥಳಕ್ಕೆ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಭೇಟಿ, ಪರಿಶೀಲನೆ ನಡೆಸಿ ಮೂರು ದಿನದೊಳಗೆ ರಸ್ತೆ ದುರಸ್ತಿ ಕೈಗೊಳ್ಳುವಂತೆ ಆಗ್ರಹಿಸಿದರು. ಬಳಿಕ ಸ್ಥಳಕ್ಕೆ ಬಂದ ಕುಮಟಾ Ac ಅವರಿಗೆ ಪ್ರತಿಭಟನಾಕಾರರು ಪರಿಸ್ಥಿತಿ ತಿಳಿ ಹೇಳುವ ಮೂಲಕ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಎ ಸಿ ಅವರು ತಾತ್ಕಾಲಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.