suddibindu.in
Soraba: ಸೊರಬಾ : ಮೆಸ್ಕಾಂ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ (Executive Engineer) ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಅಧಿಕಾರಿಗಳಾಗಿರುವ ವೆಂಟೇಶ್ ಹಾಗೂ ಚನ್ನಕೇಶ ಅವರನ್ನ ಶಿವಮೊಗ್ಗ (Shimoga) ಜಿಲ್ಲೆಯ ಸೊರಬಾ ತಾಲೂಕಿನ ಹುಲ್ತಿಕೊಪ್ಪದ ಎಸ್ ಡಿ ನಾಯ್ಕ ಅವರ ಮನೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಇಬ್ಬರೂ ಅಧಿಕಾರಿಗಳು ಹುಲ್ತಿಕೊಪ್ಪದ ಎಸ್ ಡಿ ನಾಯ್ಕ ಅವರ ಮನೆಗೆ ಸೌಹಾರ್ಧಯುತವಾಗಿ ಭೇಟಿ ನೀಡಿದ್ದು, ಈ ವೇಳೆ ಕೆಲ ಸಮಯ ಮಳೆಗಾಲದಲ್ಲಿ ಉಂಟಾಗುವ ವಿದ್ಯುತ್ ಸಮಸ್ಯೆಗಳ (electricity problems) ಬಗ್ಗೆ ಹಾಗೂ ಪರಿಹಾರದ ಕುರಿತಾಗಿ ಚರ್ಚೆ ನಡೆಸಲಾಗಿತು. ಬಳಿಕ ಎಸ್ ಡಿ ನಾಯ್ಕ ಕುಟುಂಬಸ್ಥರು ಹಾಗೂ ಆ ಸಂದರ್ಭದಲ್ಲಿ ಹಾಜರಿದ್ದ ಉತ್ತರಕನ್ನಡ ಜಿಲ್ಲೆಯ ಕುಮಟಾ ಭಾಗದ ಕೆಲ ಮುಖಂಡು ಮೆಸ್ಕಾಂ(Mescom)ಎಕ್ಸಿಕ್ಯುಟಿವ್ ಇಂಜಿನಿಯರ್ ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಅಧಿಕಾರಿಗಳಾಗಿರುವ ವೆಂಟೇಶ್ ಹಾಗೂ ಚನ್ನಕೇಶ ಅವರನ್ನ ಶಾಲು ಹೊದಿಸಿ ಆತ್ಮಿಯವಾಗಿ ಸನ್ಮಾನಿಸಲಾಯಿತು.
ಇದನ್ನೂ ಓದಿ
- Today gold and silver rate |ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ : ಬಂಗಾರ ಖರೀದಿಸುವವರಿಗೆ ಬಿಗ್ ಶಾಕ್
- ಮಾ.30ಕ್ಕೆ ಬರ್ಗಿಯಲ್ಲಿ ಸುಲುಗಾಯಿ ಪಂದ್ಯಾವಳಿ
- 428 ಕಿಲೋ ಮೀಟರ್, 589ಸಾವು, ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ
ಈ ವೇಳೆ ಸೊರಬಾ ತಾಲೂಕಿನ ವಿಶ್ವನಾಥ, ಈರಪ್ಪಯ್ಯ, ಸಾಗರ (Sagar) ತಾಲೂಕಿನ ಉದ್ಯಮಿ ಉದಯ್ ನಾಯ್ಕ, ಕುಮಟಾ ಕಾಂಗ್ರೆಸ್ ಮುಖಂಡರಾದ ಈಶ್ವರ ನಾಯ್ಕ,ನಾರಾಯಣ ನಾಯ್ಕ, ರವಿಕುಮಾರ್ ನಾಯ್ಕ, ಶಿರಸಿ ತಾಲೂಕಿನ ನೀಲಕಂಠ ನಾಯ್ಕ, ಸೇರಿದಂತೆ ಹಲವರು ಉಪಸ್ಥಿತರಿದ್ದರು..