suddibindu.in
ಕಾರವಾರ: ದಯವಿಟ್ಟು 650 ಕೋಟಿ ವೆಚ್ಚದ ಯೋಜನೆಯನ್ನ ಕೈ ಬಿಡಿ ಎಂದು ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಕಾರವಾರ ಡಿ.ಸಿ.ಎಫ್ ರವಿಶಂಕರ್ ಅವರಿಗೆ ಮನವಿ ಮಾಡಿಕೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆಯಲಾಯಿತು.ಈ ಸಂಧರ್ಭದಲ್ಲಿ ಸಮುದ್ರಕ್ಕೆ ಪ್ಲಾಸ್ಟಿಕ್ ಸೇರಂತೆ ತಡೆಯುವ ಸುಮಾರು 650 ಕೋಟಿ ವೆಚ್ಚದ ಯೋಜನೆ ಬಗ್ಗೆ ಚರ್ಚೆ ಆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ದಿನಕರ ಶೆಟ್ಟಿ ದಯವಿಟ್ಟು ಈ ಯೋಜನೆ ಜಾರಿಗೆ ತರಬೇಡಿ. ನಾನು ಬೇರೆ ಏನು ಹೇಳುವುದಿಲ್ಲ. ಯೋಜನೆ ಕೈ ಬಿಡುವುದು ಒಳ್ಳೆಯದು ಎಂದು ಡಿ.ಸಿ.ಎಫ್ ಗೆ ಮನವಿ ಮಾಡಿಕೊಂಡರು.
ಇದನ್ನೂ ಓದಿ
- Landslide/ಕದ್ರಾ-ಕೊಡಸಳ್ಳಿ ಮಾರ್ಗದಲ್ಲಿ ಗುಡ್ಡಕುಸಿತ : ರಸ್ತೆ ಸಂಚಾರ ಸ್ಥಗಿತ
- ಕೇಣಿ ಬಂದರು ಯೋಜನೆ :ಮೀನುಗಾರರ ಮನೆ/ ಕಡಲತೀರ ಸ್ವಾಧೀನವಿಲ್ಲ, ಸಾಧಕ-ಬಾಧಕ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ JSW
- school holidayಭಾರಿ ಮಳೆ ನಾಳೆ ಶಾಲೆ-ಅಂಗನವಾಡಿಗೆ ರಜೆ ಘೋಷಣೆ
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ತಮ್ಮ ಇಲಾಖೆಯಲ್ಲಿ ಪ್ಲಾಸ್ಟಿಕ್ ತಡೆಯಲು ಕೈ ಗೊಂಡ ಯೋಜನೆ ಬಗ್ಗೆ ದಿನಕರ ಶೆಟ್ಟಿ ವಿರೋಧಕ್ಕೆ ಇಳಿದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.