suddibindu.in
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ್ ಮೀನುಗಾರಿಕೆ ಬಂದರಿನ ಬಳಿ ಕುಂದಾಪುರ ಮೂಲದ ವ್ಯಕ್ತಿ ಓರ್ವನ ಶವ ಪತ್ತೆಯಾಗಿದೆ.
ಕುಂದಾಪುರ ಮೂಲದ ಯೋಗೇಶ ಟಿ.ಆರ್ (23) ಮೃತ ವ್ಯಕ್ತಿಯಾಗಿದ್ದಾನೆ. ಇಂದು ಬೆಳಿಗ್ಗೆ ಸಮುದ್ರದಲ್ಲಿ ಮೃತ ದೇಹ ತೆಲುತ್ತಿರುವುದನ್ನ ಕಂಡ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ಬಳಿಕ ಸ್ಥಳಕ್ಕೆ ಬಂದ ಕಾರವಾರ ನಗರ ಠಾಣೆಯ ಪೊಲೀಸರು ಮೃತ ದೇಹವನ್ನ ಸಮುದ್ರದಿಂದ ಮೇಲಕ್ಕೆತ್ತಿ ಪರಿಶೀನೆ ನಡೆಸಿದ್ದಾರೆ.
ಇದನ್ನೂ ಓದಿ
- ಚಿಪ್ಪಿಕಲ್ಲು ಆರಿಸಲು ಹೋದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು
- ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ಸಾವು
- ಪತಿಯನ್ನ 5 ಲಕ್ಷಕ್ಕೆ ಮಾರಾಟ ಮಾಡಿದ ಪತ್ನಿ!
ಈತ ಕುಂದಾಪುರದ ವ್ಯಕ್ತಿ ಎನ್ನುವುದು ಪತ್ತೆಯಾಗಿದೆ. ಈತ ನಾಪತ್ತೆ ಆಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಜೂನ್ 19ರಂದು ಪ್ರಕರಣ ದಾಖಲಾಗಿತ್ತು. ಇದೀಗ ಮೃತ ದೇಹ ಪತ್ತೆಯಾಗಿರುವ ಬಗ್ಗೆ ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.




